ಬ್ಲ್ಯಾಕ್ ಫಂಗಸ್ ಅನ್ನು ಬುರ್ಕಾಗೆ ಹೋಲಿಸಿದ ಯುವಕ! ಎರಡು ಸಮುದಾಯಗಳ ನಡುವೆ ಅಸಮಾಧಾನದ ಕಿಡಿ

bagalkot
Published on

ಬಾಗಲಕೋಟೆ: ಕರೊನಾದ ಬೆನ್ನಲ್ಲೇ ಬ್ಲಾಕ್​ ಫಂಗಸ್​ ಕೂಡ ಜನರ ಜೀವ ತೆಗೆಯಲು ಆರಂಭಿಸಿಬಿಟ್ಟಿದೆ. ಇದೀಗ ಆ ಬ್ಲಾಕ್​ ಫಂಗಸ್​ ಅನ್ನು ಬಾಗಲಕೋಟೆಯ ಯುವಕನೊಬ್ಬ ಬುರ್ಕಾಗೆ ಹೋಲಿಸಿ, ಎರಡು ಸಮುದಾಯಗಳ ಮಧ್ಯೆ ಅಸಮಾಧಾನದ ಕಿಡಿ ಹತ್ತಿಸಿದ್ದಾನೆ.

ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ತೇರದಾಳ ಮೂಲದ ಸದಾಶಿವ ಗೋಡಸೆ ಹೆಸರಿನ ಯುವಕ ಈ ರೀತಿ ವಿವಾದಾತ್ಮಕ ಪೋಸ್ಟ್​ ಮಾಡಿದವನು. ಆತ ಬುರ್ಕಾ ಫೋಟೋವೊಂದನ್ನು ಹಾಕಿ ಬ್ಲಾಕ್​ ಫಂಗಸ್ ಅಂದರೆ ಹೀಗಿರುತ್ತೆ ಹುಷಾರ್! ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿದ್ದಾನೆ.

ಯುವಕನ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಒಂದು ಪೋಸ್ಟ್​ನಿಂದ ಒಂದು ಸಮುದಾಯಕ್ಕೆ ಅಸಮಾಧಾನ ಉಂಟಾಗಿದೆ. ಎರಡು ಸಮುದಾಯಗಳ ಮಧ್ಯೆ ವೈಮನಸ್ಸು ಹೆಚ್ಚಾಗುವಂತಾಗಿದೆ. ಆ ಹಿನ್ನೆಲೆಯಲ್ಲಿ ತೇರದಾಳ ಪೊಲೀಸರು ಎರಡೂ ಸಮುದಾಯದವರನ್ನು ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net