ಯುವಕ ಆತ್ಮಹತ್ಯೆ

Published on

ಚಿಂತಾಮಣಿ: ಬದುಕಿನಲ್ಲಿ ಬೇಸರಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯ ಪ್ರೇಮನಗರದಲ್ಲಿ ನಡೆದಿದೆ.
ಬಡಾವಣೆ ನಿವಾಸ ವೆಂಕಟರಮಣಪ್ಪ ಅವರ ಪುತ್ರ ರಮೇಶ್ (38) ಮೃತ.
ವೃತ್ತಿಯಲ್ಲಿ ಕ್ಷೌರಿಕನಾಗಿರುವ ರಮೇಶ್ ಇತ್ತೀಚೆಗೆ ನಿವೇಶನ ಮಾರಾಟ ಮಾಡಿ ಬೆಂಗಳೂರಿನಲ್ಲಿ ಸ್ವಂತ ಸೆಲೂನ್ ತೆರೆದಿದ್ದ. ಸ್ವಂತ ಉದ್ಯಮ ಕಟ್ಟಿಕೊಂಡಿದ್ದರೂ ಕೆಲದಿನಗಳಿಂದ ಚಿಂತಾಮಣಿಯ ಮನೆಯಲ್ಲಿ ವಾಸಿಸುತ್ತಿದ್ದ. ಶುಕ್ರವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಚಿಂತಾಮಣಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರಕ್ಷಕ ನಿರೀಕ್ಷಕ ವಿಜಿಕುಮಾರ್, ಸಬ್‌ಇನ್‌ಸ್ಪೆಕ್ಟರ್ ನಾರಾಯಣಸ್ವಾಮಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net