ಕೌಟುಂಬಿಕ ಕಲಹದಿಂದ ಯುವಕ ಆತ್ಮಹತ್ಯೆ

SRP_14-Vinodh (27)-02jpg
ಮೃತ ವಿನೋದ್
Published on

ಶ್ರೀರಂಗಪಟ್ಟಣ: ತಾಲೂಕಿನ ಸಬ್ಬನಕುಪ್ಪೆ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಮನನೊಂದು ಯುವಕನೊಬ್ಬ ಶನಿವಾರ ತಡರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗ್ರಾಮದ ಪ್ರಕಾಶ್ ಎಂಬುವರ ಪುತ್ರ ವಿನೋದ್ (27) ಆತ್ಮಹತ್ಯ ಮಾಡಿಕೊಂಡವನು. ಈತ ಮದ್ಯ ವ್ಯಸನಿಯಾಗಿದ್ದು, ಆಗಾಗ್ಗೆ ತನ್ನ ಪತ್ನಿಯೊಂದಿಗೆ ಮನೆಯಲ್ಲಿ ಜಗಳ ಮಾಡುತ್ತಿದ್ದನು ಎನ್ನಲಾಗಿದೆ. ದಾಂಪತ್ಯದಲ್ಲಿ ಉಂಟಾಗಿದ್ದ ವಿರಸದಿಂದ ಈ ಹಿಂದೆ 3 ಬಾರಿ ಈತ ಆತ್ಮಹತ್ಯೆಗೆ ಯತ್ನಿಸಿದ್ದನು. ಕಳೆದ ಶನಿವಾರ ರಾತ್ರಿ ಮನೆಯಿಂದ ಹೊರಹೋಗಿ ಬರುವುದಾಗಿ ತಿಳಿಸಿ ಹೋದ ಈತ ಮನೆ ಸಮೀಪದ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ ಎಂದು ಮೃತನ ಸಹೋದರ ಸಂತೋಷ್ ಕುಮಾರ್ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net