ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ತನ್ನ ಕೈ ಬೆರಳನ್ನೇ ದೇವಿಗೆ ಅರ್ಪಿಸಿದ ವ್ಯಕ್ತಿ

Arun Varnekar
Published on

ಉತ್ತರಕನ್ನಡ: ದೇಶದಲ್ಲಿ ದಿನದಿಂದ ದಿನಕ್ಕೆ ಲೋಕಸಭೆ ಚುನಾವಣೆಯ ಕಾವು ಹೆಚ್ಚುತ್ತಿದ್ದು, ಮತದಾರರು ತಮ್ಮ ನೆಚ್ಚಿನ ಪಕ್ಷ ಗೆದ್ದು ಅಧಿಕಾರಕ್ಕೆ ಬರಲಿ ಎಂದು ಆಶಿಸುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಬೆಟ್ಟಿಂಗ್​ ಭರಾಟೆ ಸಹ ಜೋರಾಗಿರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಕೆಲವರು ತಮ್ಮ ಹೊಲ, ವಾಹನ ಸೇರಿದಂತೆ ಬೆಲೆಬಾಳುವ ವಸ್ತುವನ್ನು ಅಡವಿಡುತ್ತಾರೆ. ಕೆಲವರು ತಮ್ಮ ನೆಚ್ಚಿನ ಅಭ್ಯರ್ಥಿ ಗೆದ್ದರೆ ದೇವರಿಗೆ ತಲೆ ಕೂದಲನ್ನು ಕೊಡುತ್ತಾರೆ. ಆದರೆ, ಇದೀಗ ವ್ಯಕ್ತಿಯೊಬ್ಬ ಬಿಜೆಪಿ ಗೆದ್ದು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ತನ್ನ ಕೈ ಬೆರಳನ್ನೇ ದೇವರಿಗೆ ಹರಕೆಯಾಗಿ ಅರ್ಪಿಸಿದ್ದಾನೆ.

ಹೌದು ನೀವು ಕೇಳುತ್ತಿರುವುದು ನಿಜ. ಈ ಘಟನೆಯೂ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಸೋನಾರವಾಡದಲ್ಲಿ ನಡೆದಿದ್ದು, ಅರುಣ್ ವರ್ಣೇಕರ್ ಎಂಬ ವ್ಯಕ್ತಿಯೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಆಶಿಸಿ ತನ್ನ ಎಡಗೈನ ಬೆರಳನ್ನೇ ಕಾಳಿ ಮಾತೆಗೆ ಅರ್ಪಿಸಿ ಸುದ್ದಿಯಾಗಿದ್ದಾನೆ. ಈ ವ್ಯಕ್ತಿ ಮೋದಿಗಾಗಿ ಗುಡಿಯೊಂದನ್ನು ನಿರ್ಮಿಸಿ ಪ್ರತಿನಿತ್ಯ ಪೂಜೆ ಮಾಡುತ್ತಿದ್ದಾರೆ.

Karwar Modi

ಬೆರಳು ಕತ್ತರಿಸಿಕೊಂಡಿರುವ ಅರುಣ್​ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಗೋಡೆ ಮೇಲೆ ಬರೆದಿದ್ದಾರೆ. ಮಾ ಕಾಳಿಮಾತಾ ಮೋದಿ ಬಾಬಾಕೋ ರಕ್ಷಾ ಕರೋ. ಮೋದಿ ಬಾಬಾ ಪಿ.ಎಂ, 3 ಬಾರ್ 78ತಕ್ 378, 378+ ಮೇರಾ ಮೋದಿ ಬಾಬಾ ಸಬ್ಸೆ ಮಹಾನ್ ಎಂದು ದೇವಾಲಯದ ಗೋಡೆ ಮೇಲೆ ಬರೆದಿದ್ದಾರೆ.

ಮೋದಿ ಮೊದಲ ಬಾರಿ ಚುನಾವಣೆಗೆ ನಿಂತಾಗ ಕೂಡ ಇದೇ ಅರುಣ್ ರಕ್ತದಲ್ಲಿ ಕಾಳಿಗೆ ಹರಕೆ ಇಟ್ಟಿದ್ದರು. ಈ ಹಿಂದೆಯೂ ಬೆರಳು ಕೊಯ್ದುಕೊಂಡು ಮೋದಿ ಗೆಲುವಿಗಾಗಿ ಕಾಳಿ ಮಾತೆಗೆ ಹರಕೆ ನೀಡಿದ್ದರು. ಈ ಬಾರಿ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಬೆರಳನ್ನೇ ತುಂಡರಿಸಿ ಕಾಳಿಗೆ ಅರ್ಪಿಸಿದ್ದಾರೆ.ಇಷ್ಟೇ ಅಲ್ಲದೆ, ಅರುಣ್ ವರ್ಣೇಕರ್ ಎದೆಯ ಮೇಲೆ ಮೋದಿ ಟ್ಯಾಟೂ ಹಾಕಿಸಿಕೊಂಡು ಪ್ರಧಾನಿಯನ್ನು ದೇವರಂತೆ ಆರಾಧಿಸುತ್ತಿದ್ದಾರೆ. ಮೋದಿ ಬಾಬಾ ಎಂದು ಟ್ಯಾಟೋ ಹಾಕಿಸಿ ಅಭಿಮಾನ ಮೆರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net