More

    ಮಂಗಗಳ ದಾಳಿಯಿಂದ ಪಾರಾಗಲು ಅಲೆಕ್ಸಾ ಮೊರೆ ಹೋದ ಬಾಲಕಿ; ಬಳಿಕ ನಡೆದಿದ್ದೇನು

    ಲಖನೌ: ದೇಶದ ಬೆಳವಣಿಗೆಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಬಹುದಾಗಿದೆ. ತಂತ್ರಜ್ಞಾನ ಎಷ್ಟು ಉಪಕಾರಿಯೋ ಅದರಿಂದ ಅಷ್ಟೇ ಅಪಾಯ ಇದೆ ಎಂದು ಹೇಳಬಹುದಾಘಿದೆ. ಇದೀಗ ಅದೇ ತಂತ್ರಜ್ಞಾನದ ಸಹಾಯದಿಂದ ಮಗುವಿನ ಪ್ರಾಣ ಉಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಬಸ್ತಿ ಮೂಲದ 13 ವರ್ಷದ ಬಾಲಕಿ ನಿಕಿತಾ ತಮ್ಮ ಸೊಸೆ ವಾಮಿಕಾ (ಮಾವನ/ಅತ್ತೆಯ ಮಗಳು)ಳೊಂದಿಗೆ ಆಟವಾಡುತ್ತಿದ್ದ ಈ ಘಟನೆ ನಡೆದಿದ್ದು, ಪುಟ್ಟ ಮಗುವಿನ ಪ್ರಾಣವನ್ನು ಉಳಿಸಿರುವ ಬಾಲಕಿಯ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

    ಘಟನೆಯ ಹಿನ್ನೆಲೆ?

    ಏಪ್ರಿಲ್​ 13ರಂದು ನಿಕಿತಾ ವಾಮಿಕಾಳೊಂದಿಗೆ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಮನೆಯೊಳಗೆ ಏಕಾಏಕಿ ಮಂಗಗಳ ಹಿಂಡೊಂದು ನುಗ್ಗಿದೆ. ಅಡುಗೆ ಮನೆಯಲ್ಲಿದ್ದ ಆಹಾರ ಪದಾರ್ಥಗಳನ್ನೆಲ್ಲಾ ಮನೆಯ ತುಂಬಾ ಚೆಲ್ಲಾಡಿ ಮನೆಯಲ್ಲಿ ಆವಾಂತರ ಸೃಷ್ಟಿಸಿವೆ. ಈ ವೇಳೆ ಗುಂಪಿನಲ್ಲಿದ್ದ ಮಂಗವೊಂದು ಪದೇ ಪದೇ ನಿಕಿತಾ ಹಾಗೂ ವಾಮಿಕಾ ಬಳಿ ಬಂದು ಹೋಗುತ್ತಿತ್ತು. ಇದರಿಂದ ಭಯಗೊಂಡ ನಿಕಿತಾ ಫ್ರಿಡ್ಜ್‌ ಮೇಲೆ ಇಟ್ಟಿದ್ದ ಅಲೆಕ್ಸಾದ ಮೊರೆ ಹೋಗಿದ್ದಾಳೆ.

    ಇದನ್ನೂ ಓದಿ: ಸೋಲುಗಳಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್​ಗೆ ಮತ್ತೊಂದು ಆಘಾತ; ತಂಡದಿಂದ ಸ್ಟಾರ್​ ಆಟಗಾರ ಔಟ್​

    ಫ್ರಿಡ್ಜ್​ ಮೇಲಿರುವ ಅಲೆಕ್ಸಾಗೆ ನಾಯಿ ಬೊಗಳುವ ಶಬ್ದವನ್ನು ಪ್ಲೇ ಮಾಡುವಂತೆ ಹೇಳಿದ್ದಾಳೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಅಲೆಕ್ಸಾ ನಾಯಿ ಬೊಗಳುವ ಶಬ್ದವನ್ನು ಪ್ಲೇ ಮಾಡಿದ್ದಾಳೆ. ನಾಯಿ ಬೊಗಳುವ ಶಬ್ದವನ್ನು ಕೇಳಿದ ಮಂಗಗಳು ತಕ್ಷಣವೇ ಮನೆಯಿಂದ ಓಡಿ ಹೋಗಿದ್ದು, ಮಂಗಗಳ ದಾಳಿಯಿಂದ ಇವರಿಬ್ಬರು ತಪ್ಪಿಸಿಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ನಿಕಿತಾ ತಾಯಿ ಶಿಪ್ರಾ ಓಜಾ, ಮಂಗಗಳ ದಾಳಿಯಿಂದ ಪಾರಾಗಲು ತಮ್ಮ ಮಗಳು ಅನುಸರಿಸಿದ ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸಂಭಾವ್ಯ ಅನಾಹುತದಿಂದ ಅಲೆಕ್ಸಾ ಬಾಲಕಿಯರನ್ನು ರಕ್ಷಿಸಿದ್ದಾಳೆ. ನಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದರಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts