ಇನ್ನೆರಡು ವಾರದಲ್ಲಿ ಮದ್ವೆ ಆಗಬೇಕಿದ್ದವ, 2 ವರ್ಷದ ಮಗು ಸೇರಿ ಮೂವರು ಅಪಘಾತಕ್ಕೆ ಬಲಿ; ವಿವಾಹಕ್ಕೆಂದು ಬಟ್ಟೆ ತರಲು ಹೋಗಿದ್ದಾಗ ಆ್ಯಕ್ಸಿಡೆಂಟ್​

Untitled-1
ಇಮ್ರಾನ್, ಯಾಸ್ಮಿನ್, ಅಫ್ನಾನ್.
Published on

ಮೈಸೂರು: ಇನ್ನೆರಡು ವಾರದಲ್ಲಿ ಮದುವೆ ಆಗಬೇಕಿದ್ದ ಯುವಕನೊಬ್ಬ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾನೆ. ವಿಪರ್ಯಾಸವೆಂದರೆ ವಿವಾಹಕ್ಕೆಂದು ಬಟ್ಟೆ ತರಲು ಹೋಗಿದ್ದಾಗಲೇ ಈ ಅಪಘಾತ ಸಂಭವಿಸಿದೆ.

ಬಸ್-ಆಟೋ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇಮ್ರಾನ್ ಪಾಷಾ (30), ಯಾಸ್ಮಿನ್ (28), ಅಫ್ನಾನ್ (2) ಸ್ಥಳದಲ್ಲೇ ಮೃತಪಟ್ಟವರು. ಮತ್ತೊಂದೆಡೆ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ, ಮತ್ತೊಬ್ಬರಿಗೆ ಕಾಲು ಮುರಿದುಹೋಗಿದೆ. ಗಾಯಾಳುಗಳನ್ನು ಕೆ.ಆರ್​. ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಮ್ರಾನ್ ಪಾಷಾಗೆ ಮದುವೆ ನಿಶ್ಚಯವಾಗಿದ್ದು, ಅ.24ಕ್ಕೆ ವಿವಾಹ ಎಂದು ನಿಗದಿಯಾಗಿತ್ತು. ಮದುವೆ ಬಟ್ಟೆ ಖರೀದಿಗೆಂದು ಮೈಸೂರಿಗೆ ಹೋಗಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮೈಸೂರು- ತಿ. ನರಸೀಪುರ ಹೆದ್ದಾರಿಯ ವರಕೋಡು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪದ ತಿರುವಿನಲ್ಲಿ ಬಸ್​-ಆಟೋ ಮುಖಾಮುಖಿ ಡಿಕ್ಕಿಯಾಗಿದೆ. ಅಂದಹಾಗೆ ಅಪಘಾತಕ್ಕೀಡಾಗಿದ್ದು ಗೂಡ್ಸ್ ಆಟೋ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net