ಜೀವಂತ ಸುಟ್ಟುಹೋದ ಯುವಕ, ಶವ ಕರಟಿ ಕರಕಲು; ಗ್ಯಾಸ್​ ಸಿಲಿಂಡರ್ ಸ್ಫೋಟ, ಸಿಡಿತಕ್ಕೆ ಕಿತ್ತುಹೋಯ್ತು ಮನೆ ಚಾವಣಿ..

Blast
Published on

ಚಾಮರಾಜನಗರ: ಗ್ಯಾಸ್​ ಸಿಲಿಂಡರ್ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಯುವಕನೊಬ್ಬ ಜೀವಂತ ಸುಟ್ಟುಹೋಗಿದ್ದು, ಶವ ಕರಟಿ ಕರಕಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದ ಸ್ವಾಮಿ (28) ಸಾವಿಗೀಡಾದ ಯುವಕ. ಮನೆಯಲ್ಲಿ ಅಡುಗೆ ಅನಿಲ ಸೋರಿಕೆ ಹಾಗೂ ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಸಂಭವಿಸಿದ ಸ್ಫೋಟದಲ್ಲಿ ಈತ ಸಾವಿಗೀಡಾಗಿದ್ದಾನೆ.

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಮನೆಯ ಛಾವಣಿ ಕಿತ್ತು ಹಾರಿಹೋಗಿದ್ದು, ಛಾವಣಿಯ ಜಂತಿಗಳು ಸುಟ್ಟು ಕರಕಲಾಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಬೆಂಕಿಗೆ ಆಹುತಿಯಾಗಿವೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net