

ಹೊನ್ನಾಳಿ: ತಾಲೂಕಿನ ಗುಡ್ಡೆಹಳ್ಳಿ ಗ್ರಾಮದ ಭಗವಾನ್ ಬಾಯ್ಸನ ಯುವಕರು ತಮ್ಮ ನೆಚ್ಚಿನ ಭಗವಾನ್ 226 ಹೆಸರಿನ ಹೋರಿಯ 4ನೇ ವರ್ಷದ ಹುಟ್ಟುಹಬ್ಬವನ್ನು 12 ಕೆಜಿ ಕೇಕ್ ಕಟ್ ಮಾಡುವ ಮೂಲಕ ಭಾನುವಾರ ಅದ್ದೂರಿಯಾಗಿ ಆಚರಿಸಿದರು.
ಬೆಳಗ್ಗೆ ಭಗವಾನ್ (ಹೋರಿ)ಗೆ ಮೈತೊಳೆದು ಅಲಂಕಾರ ಮಾಡಿ, ಪೂಜೆ ಮಾಡಿದರು. ಗ್ರಾಮದೇವತೆ ಆಂಜನೇಯ ದೇಗುಲಕ್ಕೆ ಕರೆತಂದು ಪೂಜೆ ಸಲ್ಲಿಸಲಾಯಿತು. ಕೃಷಿ ಚಟುವಟಿಕೆಗಳಲ್ಲಿ ತೊಡಗುವ ಭಗವಾನ್ (ಹೋರಿ)ಗೆ ಗ್ರಾಮಸ್ಥರು ಶುಭಾಶಯ ಕೋರಿದರು.
ಬಳಿಕ ಊಟದ ವ್ಯವಸ್ಥೆ ಮಾಡಿದ್ದರು. ತಮಿಳುನಾಡಿನಿಂದ ತಂದಿರುವ ಈ ಭಗವಾನ್ ಹೆಸರಿನ ಹೋರಿಯು ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಲು ಬಳಸಲಾಗುತ್ತದೆ. ಇದಕ್ಕಾಗಿ ವಿಶೇಷ ತರಬೇತಿ ನೀಡಲಾಗುತ್ತದೆ ಎನ್ನುತ್ತಾರೆ ಸ್ಪರ್ಧಾ ಪ್ರೇಮಿಗಳು.
ಗ್ರಾಮಸ್ಥರಾದ ಅರುಣ್‌ಕುಮಾರ್, ನಾಗರಾಜ್, ಶಿಕ್ಷಕ ಪ್ರಭು, ಕೆ.ಎನ್.ಉಮೇಶ್, ಭಗವಾನ್ ಬಾಯ್ಸಗಳಾದ ಕಾರ್ತಿಕ್, ಅಭಿಷೇಕ್, ಚೇತನ್, ಕಿರಣ್, ಪ್ರಮೋದ್, ಭಾನುಪ್ರಕಾಶ್, ಜೀವನ್, ಕರ್ಣ, ಗೂಳಿ ಬ್ರದರ್ಸ್ ಇತರರು ಇದ್ದರು.