ಕುಂತೂರಿನಲ್ಲಿ ವಿಶ್ರಾಂತಿ ತಾಣ ನಿರ್ಮಿಸಿದ ಯುವಕರು: ಕೆಂಪು ಕಲ್ಲು ಸಮಸ್ಯೆಯಿಂದ ಕೆಲ ಸಮಯದಿಂದ ಮನೆಯಲ್ಲಿರುವ ಅನಿವಾರ್ಯತೆ

New Project (10)
Published on

ವಿಜಯವಾಣಿ ಸುದ್ದಿಜಾಲ ಕಡಬ

ಪೆರಾಬೆ ಗ್ರಾಪಂ ವ್ಯಾಪ್ತಿಯ ಕುಂತೂರಿನ ಯುವಕರ ತಂಡವೊಂದು ತಮ್ಮ ಕಾಲನಿ ರಸ್ತೆಯಲ್ಲಿ ಸುಂದರ ವಿಶ್ರಾಂತಿ ತಾಣವೊಂದನ್ನು ನಿರ್ಮಿಸಿದೆ. ಕೆಂಪು ಕಲ್ಲು ಸಮಸ್ಯೆಯಿಂದ ಕೆಲಸವಿಲ್ಲದೆ ಮನೆಯಲ್ಲೇ ಇದ್ದ ಯುವಕರು ತಮ್ಮ ಸಮಯವನ್ನು ಸಮಾಜಮುಖಿ ಕಾರ್ಯಕ್ಕೆ ತೊಡಗಿಸಿಕೊಂಡಿದ್ದಾರೆ.

ಕಡಿರಡ್ಕ ಮತ್ತು ಪುರುಷಬೆಟ್ಟು ಭಾಗದ ಯುವಕರು ಎಂಟು ವರ್ಷಗಳ ಹಿಂದೆಯೇ ಸಮರ್ಪಕ ವಿಶ್ರಾಂತಿ ತಾಣ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದರು. ಹೀಗಾಗಿ ಆರಂಭದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ದಾನಿಗಳ ನೆರವಿನಿಂದ ಯುವಕರ ಶ್ರಮ ಸೇವೆಯಿಂದ ಸುಂದರ ವಿಶ್ರಾಂತಿ ತಾಣ ನಿರ್ಮಾಣವಾಗಿದೆ.

ತಂಗುದಾಣವನ್ನು ಹಿರಿಯರಾದ ನಕ್ಕುರ ಪುರುಷಬೆಟ್ಟು ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯ ಸದಾನಂದ ಕುಂಟ್ಯಾನ, ‘ಅಭಿಮಾನಿ ಬಳಗ ಕಡಿರಡ್ಕ’ ಎಂಬ ನಾಮಫಲಕ ಅನಾವರಣಗೊಳಿಸಿದರು.

ತಂಗುದಾಣಕ್ಕೆ ದಾನಿಗಳಾಗಿ ಸಹಕರಿಸಿದ ಇಬ್ರಾಹಿಂ ಕಜೆ, ಫಯಾಜ್ ಚಾಮೆತ್ತಡ್ಕ, ನೌಶಾದ್ ಕೋಚಕಟ್ಟೆ, ಸಾಜಾನ್ ಕುಂತೂರ್, ಪುರಂದರ ಗುತ್ತುಪಾಲ್, ಪೆರಾಬೆ ಗ್ರಾಪಂ ಸದಸ್ಯರಾದ ಸದಾನಂದ ಕುಂಟ್ಯಾನ, ಮೆನ್ಸಿ ಸಾಜಾನ್ ಕುಂತೂರ್, ಲೀಲಾವತಿ ಆಗತ್ತಾಡಿ, ಗಂಗಾಂಧರ ಕಡೀರಡ್ಕ ಅವರನ್ನು ಗೌರವಿಸಲಾಯಿತು. ಅಲಂಕಾರು ಮೆಸ್ಕಾಂ ಸಿಬ್ಬಂದಿ ಚಿದಾನಂದ್ ಅವರನ್ನು ಸನ್ಮಾನಿಸಲಾಯಿತು.

ಅಭಿಮಾನಿ ಬಳಗದ ಸದಸ್ಯರಾದ ಸುಂದರ ಪುರುಷಬೆಟ್ಟು, ವಿಶ್ವಾಸ್ ಪುರುಷಬೆಟ್ಟು, ಮಾಧವ ಪುರುಷಬೆಟ್ಟು, ಕಡಿರಡ್ಕ ನಿವಾಸಿಗಳಾದ ಆನಂದ, ಹರೀಶ್, ಲೋಕೇಶ್, ದಾಮೋದರ, ತಾರಾನಾಥ್, ದಯಾನಂದ, ನಿತಿನ್, ಯೋಗೀಶ್, ಯತೀಶ್, ಗಣೇಶ್, ಪ್ರವೀಣ್, ಶಿವಾನಂದ ಮತ್ತು ಆಲಂಕಾರು ಮೊಗೇರ ಸಂಘದ ಕಾರ್ಯದರ್ಶಿ ಸಂದೀಪ್ ಪಾಂಜೋಡಿ, ಸದಸ್ಯ ಸುರೇಶ್ ತೋಟಂತಿಲ, ಮೆಸ್ಕಾಂ ಸಿಬ್ಬಂದಿ ಪರಶುರಾಮ್ ಮತ್ತಿತರರು ಉಪಸ್ಥಿತರಿದ್ದರು. ಮಹಾಬಲ ಪಡುಬೆಟ್ಟು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net