ಬೆಳ್ತಂಗಡಿ: ಧರ್ಮ ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಹೇಳಿಕೆ ನೀಡಿದ್ದಾರೆ ಎಂದು ವಸಂತ ಗಿಳಿಯಾರ್ ವಿರುದ್ಧ ಸಿಪಿಐಎಂ ಮುಖಂಡ ಶೇಖರ್ ಲೈಾಲ ಬೆಳ್ತಂಗಡಿ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ. ಕ್ರಿಶ್ಚಿಯನ್ ಮುಖಂಡರ ದೂರು ಕ್ರಿಶ್ಚಿಯನ್ ಧರ್ಮದ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ವಸಂತ ಗಿಳಿಯಾರ್ ವಿರುದ್ಧ ಕ್ರಿಶ್ಚಿಯನ್ ಮುಖಂಡರು ಮಂಗಳವಾರ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಸುಜಾತಾ ಭಟ್ ಪ್ರಾಥಮಿಕ ವಿಚಾರಣೆ
ಅನನ್ಯಾ ಭಟ್ ನಾಪತ್ತೆ ಪ್ರಕರಣ ಸಂಬಂಧ ದೂರು ನೀಡಿದ್ದ ಸುಜಾತಾ ಭಟ್ ಪ್ರಾಥಮಿಕ ವಿಚಾರಣೆ ಮಂಗಳವಾರ ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ನಡೆಯಿತು. ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಶೋಧ ಕಾರ್ಯಾಚರಣೆಯಲ್ಲಿದ್ದ ಕಾರಣ ಸುಜಾತಾ ಭಟ್ ಅವರನ್ನು ಪೂರ್ಣ ಪ್ರಮಾಣದಲ್ಲಿ ವಿಚಾರಣೆ ನಡೆಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಸುಜಾತಾ ಭಟ್ ಮಂಗಳವಾರ ಬೆಳಗ್ಗೆ 5.30ಕ್ಕೆ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಆಗಮಿಸಿ ತಾನು ವಿಚಾರಣೆಗೆ ಸಹಕಾರ ನೀಡುವುದಾಗಿ ಹೇಳಿದರು. ಆದರೆ ಎಸ್‌ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಶೋಧ, ಮಹಜರು ಪ್ರಕ್ರಿಯೆ ನಡೆಸಲು ಪೂರ್ವ ನಿರ್ಧಾರ ಕೈಗೊಂಡು ಪೂರಕವಾಗಿ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದಿದ್ದ ಕಾರಣ ಅವರಿಗೆ ಸುಜಾತಾ ಭಟ್ ವಿಚಾರಣೆ ಪೂರ್ಣ ಪ್ರಮಾಣದಲ್ಲಿ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪ್ರಾಥಮಿಕ ವಿಚಾರಣೆ ಮಾತ್ರ ನಡೆಸಲಾಯಿತು.