ಚಲಿಸುತ್ತಿದ್ದ ರೈಲಿನಿಂದ ಬಿದ್ದು ಯುವಕ ಮೃತ್ಯು

Suicide
Published on

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿಕ್ಕರಿಪುರದ ರೈಲ್ವೆ ಹಳಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಮೃತನನ್ನು ಅಸ್ಸಾಂ ನಿವಾಸಿ ಸುಂದರ್ ಸೋರಾನ್(31) ಎಂದು ಗುರುತಿಸಲಾಗಿದೆ. ಚಲಿಸುತ್ತಿದ್ದ ರೈಲಿನಿಂದ ಬಿದ್ದು ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ಮೃತದೇಹದ ಅಂಗಿಯ ಜೇಬಿನಲ್ಲಿ ಪಾಲಕ್ಕಾಡಿನಿಂದ ಕಾಸರಗೋಡಿಗೆ ತೆರಳುವ ರೈಲ್ವೆ ಟಿಕೆಟ್ ಪತ್ತೆಯಾಗಿದೆ. ಚಂದೇರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net