

ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಗೋಡೆಗಳಿಗೆ ಸುಣ್ಣಬಣ್ಣ ಬಳಿದ ಕಾರ್ಯಕರ್ತರು
ರಾಮನಗರ
ನಗರದ ಕಾಮಣ್ಣನಗುಡಿ ವೃತ್ತದಲ್ಲಿನ ಸರ್ಕಾರಿ ಅನುದಾನಿತ ಪ್ರಗತಿ ವಿದ್ಯಾಸಂಸ್ಥೆಯ ತರಗತಿ ಕಟ್ಟಡಗಳ ಗೋಡೆಗಳಿಗೆ ಚರ್ಕವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ಬಣ್ಣ ಬಳಿದು ಶಾಲೆಯನ್ನು ಚಂದಗೊಳಿಸಿದರು.
ಭಾನುವಾರ ಬೆಳಗ್ಗೆ ಬಿಗೇಡ್‌ನ 20-30 ಮಂದಿ ತಂಡ ಚರ್ಕವರ್ತಿ ಸೂಲಿಬೆಲೆ ಅವರೊಂದಿಗೆ ಸರ್ಕಾರಿ ಅನುದಾನಿತ ಪ್ರಗತಿ ವಿದ್ಯಾಸಂಸ್ಥೆಯ ಗೋಡೆಗಳನ್ನು ಸ್ವಚ್ಛಗೊಳಿಸಿ ನಂತರ ಬಣ್ಣ ಬಳಿದರು.
ಈ ವೇಳೆ ಚರ್ಕವರ್ತಿ ಸೂಲಿಬೆಲೆ ವಾತನಾಡಿ, ರಾಮನಗರದ ಪ್ರಗತಿ ವಿದ್ಯಾಸಂಸ್ಥೆ, ಚನ್ನಪಟ್ಟಣದ ಪಟೇಲ್‌ದೊಡ್ಡಿಯ ಸರ್ಕಾರಿ ಶಾಲೆ ಸೇರಿ ರಾಜ್ಯದ ಸುವಾರು 250ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಗೋಡೆಗಳಿಗೆ ಬಣ್ಣ ಬಳಿದು, ಆವರಣವನ್ನು ಸ್ವಚ್ಛಗೊಳಿಸಲಾಗಿದೆ. ಕೆಲ ತಿಂಗಳ ಹಿಂದೆ ಪ್ರಗತಿ ಶಾಲೆಯ ಹಂಚಿನ ಛಾವಣಿಗೆ ಟಾರ್ ಶೀಟ್‌ಗಳನ್ನು ಹೊದಿಸಲಾಗಿತ್ತು. ತದನಂತರ ಮಳೆಗಾಳದಲ್ಲಿ ತರಗತಿಗಳಲ್ಲಿ ಮಳೆ ನೀರು ಜಿನುಗುವುದು ನಿಂತಿದ್ದು, ಈಗ ಶಾಲೆಯ ಗೋಡೆಗಳಿಗೆ ಸಗಣಿಯಿಂದ ತಯಾರಿಸಿದ ಬಣ್ಣ ಬಳಿಯಲಾಗಿದೆ ಎಂದರು.
ಐರನ್ ಮೌಂಟೇನ್ ಉದ್ಯಮದ ವ್ಯವಸ್ಥಾಪಕಿ ನಮಿತಾ ಮಾತನಾಡಿ, ಶಾಲೆಯ ಸವಾರಂಭವೊಂದರಲ್ಲಿ ಪಾಲ್ಗೊಂಡಿದ್ದಾಗ, ಶಾಲೆಯ ಸ್ಥಿತಿ ಕಂಡು, ಉದ್ಯಮದ ಸಿಎಸ್‌ಆರ್ ನಿಧಿಯಿಂದ ಶಾಲೆಗೆ ರೂಪ ಕೊಡಬೇಕು ಎಂದು ಅನಿಸಿತು. ಇದಕ್ಕೆ ಪೂರಕವಾಗಿ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆಯವರು ಸ್ಪಂದಿಸಿದರು ಎಂದರು.
ಪ್ರಗತಿ ಶಾಲೆಯ ತರಗತಿಗಳಿಗೆ ಅಗತ್ಯವಾಗಿದ್ದ ಸೀಲಿಂಗ್ ಫ್ಯಾನ್, ಡೆಸ್ಕ್, ಗ್ರೀನ್ ಬೋರ್ಡ್, ವಾಟರ್ ಫಿಲ್ಟರ್, ಹಂಚಿನ ಮೇಲೆ ಟಾರ್ ಶೀಟ್‌ಗಳ ಹೊದಿಕೆ, ಅಲ್ಯೂಮೀನಿಯಂ ಕಿಟಕಿಗಳನ್ನು ಪೂರೈಸಲಾಗಿದೆ. ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್, ಸಾಕ್ಸ್, ಸಮವಸ್ತ್ರ ನೀಡಲಾಗಿದೆ. ಇಂದು ಗೋಡೆಗಳಿಗೆ ಬಣ್ಣ ಬಳಿಯಲಾಗುತ್ತಿದೆ ಎಂದರು.
ರಾಮನಗರದ ಪ್ರಗತಿ ವಿದ್ಯಾಸಂಸ್ಥೆ ಕಟ್ಟಡಕ್ಕೆ ಯುವ ಬ್ರಿಗೇಡ್‌ನಿಂದ ಬಣ್ಣ ಬಳಿಯಲಾಯಿತು. ಬ್ರಿಗೇಡ್‌ನ ಚರ್ಕವರ್ತಿ ಸೂಲಿಬೆಲೆ, ಐರನ್ ಮೌಂಟೇನ್ ಉದ್ಯಮದ ವ್ಯವಸ್ಥಾಪಕಿ, ಪ್ರಗತಿ ಶಾಲೆ ಅಧ್ಯಕ್ಷ ಟಿ.ಅರ್.ರಾಮಚಂದ್ರ, ಕಾರ್ಯದರ್ಶಿ ಯಾದವೇಂದ್ರ, ಮುಖ್ಯಶಿಕ್ಷಕಿ ದಾಕ್ಷಾಯಿಣಿ, ಐರನ್ ಮೌಂಟೆನ್‌ನ ಪ್ರಶಾಂತ್ ಹಿರೇಮಠ, ಯುವ ಬ್ರಿಗೇಡ್‌ನ ಕೃಷ್ಣ, ರಘುವೀರ್, ಸಿದ್ದರಾಜು, ತೇಜಸ್, ರಾಜು, ಸವಾಜ ಸೇವಕಿ ಆಶಾ.ವಿ.ಇದ್ದರು.