ಯುವಜನತೆಗೆ ಭಗತ್‌ಸಿಂಗ್ ಪ್ರೇರಕ ಶಕ್ತಿ : ಎಐವೈಎಫ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಬಣ್ಣನೆ

DVG AVARAGERE 28
Published on

ದಾವಣಗೆರೆ: ದೇಶದ ಯುವಜನತೆಗೆ ಕ್ರಾಂತಿಕಾರಿ ಭಗತ್‌ಸಿಂಗ್ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಎಐವೈಎಫ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಹೇಳಿದರು.

ನಗರದ ಆವರಗೆರೆಯ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ರಾಂತಿಕಾರಿ ಭಗತ್‌ಸಿಂಗ್‌ರ 116ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟಿಷರು ನಡೆಸಿದ ಮಾರಣಹೋಮ ಭಗತ್‌ಸಿಂಗ್ ಅವರಲ್ಲಿ ಸ್ವಾತಂತ್ರೃ ಹೋರಾಟದ ಕಿಚ್ಚನ್ನು ಮೂಡಿಸಿತ್ತು ಎಂದು ತಿಳಿಸಿದರು.

ದೇಶದ ಸ್ವಾತಂತ್ರೃದ ಜತೆಗೆ ಸಮ ಸಮಾಜದ ಕನಸು ಕಂಡು ಚಿಕ್ಕ ವಯಸ್ಸಿನಲ್ಲೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್‌ಸಿಂಗ್‌ರ ಆದರ್ಶವನ್ನು ಯುವಜನರು ಅಳವಡಿಸಿಕೊಳ್ಳಬೇಕು ಎಂದರು.

ಎ.ಐ.ವೈ.ಎಫ್ ಜಿಲ್ಲಾಧ್ಯಕ್ಷ ರಾಜು ಕೆರೆಯಾಗಳಹಳ್ಳಿ, ಪ್ರಧಾನ ಕಾರ್ಯದರ್ಶಿ ಎ. ತಿಪ್ಪೇಶಿ, ಉಪಾಧ್ಯಕ್ಷ ಮಳಲ್ಕೆರೆ ರುದ್ರೇಶ್, ಎಸ್‌ಡಿಎಂಸಿ ಅಧ್ಯಕ್ಷ ಸಿ. ಗುರುಮೂರ್ತಿ, ಮುಖಂಡರಾದ ಎ.ಕೆ. ಹನುಮಂತಪ್ಪ ನಿಟ್ಟುವಳ್ಳಿ, ಹುಲಿಗೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net