ಮಾದಕ ವಸ್ತು ಸೇವನೆಗೆ ಯುವಕರು ಬಲಿ

01-kalaghatagi 2- MADAKA VYASANA
Published on

ಕಲಘಟಗಿ: ಮಾದಕ ವಸ್ತು ಸೇವನೆಯಿಂದ ಯುವಕರು ಬಲಿಯಾಗುತ್ತಿರುವುದು ಕಳಕಳಿಯ ಸಂಗತಿ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಜಿ. ಆರ್. ಶೆಟ್ಟರ್ ಬೇಸರ ವ್ಯಕ್ತಪಡಿಸಿದರು.


ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದ ಶ್ರೀ ಗುರುದೇವ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಕಿರಿಯ ದಿವಾಣಿ ನ್ಯಾಯಾಧೀಶ ಎನ್. ಗಣೇಶ, ಶಾಲಾ ಮುಖ್ಯ ಶಿಕ್ಷಕ ಪಿ.ವಿ. ಕಲ್ಲಾಪುರ, ಕೆ.ಫ್. ಅರಿಶಿಣಗಿರಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಧನಿಗೊಂಡ, ಶಿವರುದ್ರ ಧನಿಗೊಂಡ, ಎಸ್.ಆರ್. ಹೊಸವಕಲ್ಲ, ಶಿವು ಹಾವೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net