ಯುವತಿಗೆ ಖಾರದ ಪುಡಿ ಎರಚಿ ಕಲ್ಲೆಸೆತ

assault
Published on

ಕಾಸರಗೋಡು: ಯುವತಿಯ ಕಣ್ಣಿಗೆ ಖಾರದ ಪುಡಿಯೆರಚಿ ಕಲ್ಲೆಸೆದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಡೂರುಪಾಂಡಿ ಬಲವಂತಡ್ಕ ನಿವಾಸಿ ಶಂಕರನ್ ಎಂಬಾತನ ವಿರುದ್ಧ ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಡೂರು ಪಾಂಡಿ ಬಲವಂತಡ್ಕ ನಿವಾಸಿ ಅನುಜಾ ಎಂಬುವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಶುಕ್ರವಾರ ಮಧ್ಯಾಹ್ನ ಬಲವಂತಡ್ಕ ಸೇತುವೆ ಸನಿಹ ಆರೋಪಿ, ಕಣ್ಣಿಗೆ ಖಾರದ ಪುಡಿಯೆರಚಿ, ಕಲ್ಲೆಸೆದು ಗಾಯಗೊಳಿಸಿರುವುದಾಗಿ ಅನುಜಾ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net