

ಕಾಸರಗೋಡು: ಕ್ರೀಡಾ ಸಮವಸ ವಿಷಯದ ಬಗ್ಗೆ ಕುಂಡಂಗುಳಿಯಲ್ಲಿ ಶಾಲಾ ವಿದ್ಯಾರ್ಥಿಗಳ ಮಧ್ಯೆ ರ್ಷಣೆ ನಡೆದಿದ್ದು, ಪೊಲೀಸರ ಮಧ್ಯಪ್ರವೇಶದಿಂದ ತಂಡವನ್ನು ಚದುರಿಸಿದ್ದಾರೆ. ಕುಂಡಂಗುಯಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳು ವಿಭಿನ್ನ ಕ್ರೀಡಾ ಸಮವಸ್ತ್ರದೊಂದಿಗೆ ಆಗಮಿಸಿದಾಗ ಶಾಲಾ ಅಧಿಕಾರಿಗಳು ಇದಕ್ಕೆ ತಡೆಯೊಡ್ಡಿದ್ದರು. ಇದೇ ವಿಷಯದಲ್ಲಿ ಪ್ಲಸ್‌ವನ್ ಹಾಗೂ ಪ್ಲಸ್ ಟು ವಿದ್ಯಾರ್ಥಿಗಳ ಕುಂಡಂಗುಯಿ ಪೇಟೆಯಲ್ಲಿ ಪರಸ್ಪರ ರ್ಷಣೆಯಲ್ಲಿ ನಿರತರಾಗಿದ್ದು, ಸ್ಥಳೀಯ ನಿವಾಸಿಗಳು ಹಾಗೂ ಚಾಲಕರು ಮಧ್ಯಪ್ರವೇಶಿಸಿ ರ್ಷಣೆ ನಿಯಂತ್ರಿಸಲು ಮುಂದಾದರೂ ವಿದ್ಯಾರ್ಥಿಗಳು ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ. ವಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಬೇಡಡ್ಕ ಠಾಣೆ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಿದ್ದಾರೆ.