

ಪಡುಬಿದ್ರಿ: ಕಟಪಾಡಿ ಮಟ್ಟು ಬೀಚ್ ಬಳಿ ಸಮುದ್ರದಲ್ಲಿ ಈಜಾಡುತ್ತಿದ್ದ 6 ವಿದ್ಯಾರ್ಥಿಗಳ ತಂಡದಲ್ಲಿದ್ದ ಮಣಿಪಾಲದ ಸಿಪಿಎಸ್ ವಿದ್ಯಾರ್ಥಿ ಮಧ್ಯಪ್ರದೇಶ ಮೂಲದ ವೀರೂರುಲ್ಕರ್(18) ಎಂಬಾತ ಮೃತಪಟ್ಟ ಟನೆ ಶನಿವಾರ ನಡೆದಿದೆ. ವಿದ್ಯಾರ್ಥಿಗಳು ಸಮುದ್ರದಲ್ಲಿ ಈಜಾಡುತ್ತಿದ್ದ ಸಂದರ್ಭ ಸ್ಥಳೀಯರು ಎಚ್ಚರಿಸಿದ್ದು, ಸ್ಥಳವನ್ನು ಬದಲಿಸಿ ಮತ್ತೊಂದು ಭಾಗದಲ್ಲಿ ಈಜಾಡುತ್ತಿದ್ದಾಗ ಘಟನೆ ನಡೆದಿದೆ. ಸ್ಥಳೀಯರಾದ ಆರ್ಯನ್, ಪ್ರವೀಣ್ ಮತ್ತಿತರರು ರಕ್ಷಣಾ ಕಾರ್ಯ ನಡೆಸಿ ವಿದ್ಯಾರ್ಥಿಗಳನ್ನು ಪಾರು ವಾಡಿದ್ದು, ಅಲೆಗಳ ಹೊಡೆತಕ್ಕೆ ಸಿಲುಕಿದ ವೀರೂರುಲ್ಕರ್ ಮೃತಪಟ್ಟಿದ್ದಾನೆ. ಕಾಪು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.