

ನ್ಯಾಮತಿ: ಮನೆಯಲ್ಲಿ ಇಲಿಗಳನ್ನು ಕೊಲ್ಲಲು ಪಾಷಾಣ ಸವರಿ ಇಟ್ಟಿದ್ದ ಟೊಮ್ಯಾಟೊ ಹಣ್ಣನ್ನು ತಿಂದು ಯುವತಿಯೊಬ್ಬಳು ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಎಕೆ ಕಾಲನಿ ನಿವಾಸಿ ಎಚ್. ಐಶ್ವರ್ಯಾ (21) ಮೃತಪಟ್ಟ ಯುವತಿ.
ಪಟ್ಟಣದ ಪ್ರಥಮದರ್ಜೆ ಕಾಲೇಜಿನಲ್ಲಿ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾಳೆ.
ಜೂ. 2 ರಂದು ಯುವತಿ ವಿಷ ಸವರಿದ್ದ ಹಣ್ಣು ತಿಂದಿದ್ದು, ಮೂರು ದಿನ ವಾಂತಿಯಾಗಿ ಆರೋಗ್ಯ ಕೆಟ್ಟಿತ್ತು.
ಕೂಡಲೇ ಮನೆಯವರು ಆಸ್ಪತ್ರೆಗೆ ಕರೆದೊಯ್ದಿದ್ದು, ಆಗ ಹೊಟ್ಟೆಯಲ್ಲಿ ವಿಷವಿರುವುದು ಪರೀಕ್ಷೆಯಿಂದ ಪತ್ತೆಯಾಗಿದೆ.
ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾಳೆ. ಈ ಬಗ್ಗೆ ಯುವತಿಯ ತಂದೆ ಹಾಲೇಶಪ್ಪ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.