ಹಿರಿಯೂರು ಗ್ರಾಮದ ಯುವತಿ ನಾಪತ್ತೆ

Published on

ತಿ.ನರಸೀಪುರ: ಕೆಲಸ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಯುವತಿಯೊಬ್ಬಳು ನಾಪತ್ತೆಯಾಗಿದ್ದಾಳೆ.

ತಾಲೂಕಿನ ಹಿರಿಯೂರು ಗ್ರಾಮದ ರಂಗಸ್ವಾಮಿ ಎಂಬುವರ ಪುತ್ರಿ ಆರ್.ರಾಧಾ (30) ಕಾಣೆಯಾದ ಯುವತಿ. ಈಕೆ ಆ.5 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡಿನಲ್ಲಿ ಬಸ್ ಹತ್ತಿದ್ದಾಳೆ. ಆಕೆಯನ್ನು ಬಸ್ಸಿಗೆ ಹತ್ತಿಸಿದ ತಂದೆ ಬೆಂಗಳೂರು ತಲುಪಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಮೊಬೈಲ್ ಕರೆ ಮಾಡಿದಾಗ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು.

ಬಂಧು-ಬಳಗ ಹಾಗೂ ಸಂಬಂಧಿಕರ ಮನೆಯಲ್ಲೂ ವಿಚಾರಿಸಲಾಗಿ ಆಕೆಯ ಸುಳಿವು ಪತ್ತೆಯಾಗಿಲ್ಲ. ಈಕೆಯ ಸುಳಿವು ಸಿಕ್ಕಲ್ಲಿ ಪಟ್ಟಣದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net