ಮದುವೆಗೆ ನಿರಾಕರಿಸಿದ್ದರಿಂದ ಯುವತಿ ಆತ್ಮಹತ್ಯೆ

4 SND 01
ಸಿಂಧನೂರಿನಲ್ಲಿ ಕರ್ನಾಟಕ ರಾಜ್ಯ ಭೋವಿ ಸಂಘ ತಾಲೂಕು ಘಟಕ ಪ್ರತಿಭಟನೆ ನಡೆಸಿತು. ಸಮಾಜ ತಾಲೂಕು ಅಧ್ಯಕ್ಷ ಲಕ್ಷ್ಮಣ ಭೋವಿ, ಖಜಾಂಚಿ ಶಂಕರ ಬ್ಯಾಡಗಿ, ಗ್ರಾಮ ಘಟಕ ಅಧ್ಯಕ್ಷ ಯಂಕೋಬ ಸಾಸಲಮರಿ, ಮಹಿಳಾ ಘಟಕ ಅಧ್ಯಕ್ಷೆ ಗದ್ದೆಮ್ಮ ಇತರರಿದ್ದರು.
Published on

ಸಿಂಧನೂರು: ರಾಯಚೂರಿನಲ್ಲಿ ಭೋವಿ ಸಮುದಾಯದ ಬಾಲಕಿಯನ್ನು ಪ್ರೇಮಿಸಿ, ಮೋಸ ಎಸಗಿದ್ದರಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು ಕೂಡಲೇ ಮೋಸ ಮಾಡಿದ ಯುವಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಭೋವಿ ಸಂಘ ತಾಲೂಕು ಘಟಕ ಗುರುವಾರ ಪ್ರತಿಭಟನೆ ನಡೆಸಿತು.

ರಾಯಚೂರಿನ ವಿನಯರಡ್ಡಿ ಮದುವೆಯಾಗುವುದಾಗಿ ನಂಬಿಸಿ ಮೋಸ ಎಸಗಿ, ಮದುವೆ ನಿರಾಕರಿಸಿದ್ದರಿಂದ ಬಾಲಕಿ ಪೊಲೀಸ್ ಸಾಂತ್ವಾನ ಕೇಂದ್ರದ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಆತ್ಮಹತ್ಯೆಗೆ ಯುವಕ ಮಾಡಿದ ಮೋಸವೇ ಕಾರಣವಾಗಿದೆ.

ಪ್ರಕರಣ ದಾಖಲಿಸಿದ್ದು ಯುವಕನನ್ನು ಬಂಧಿಸಲಾಗಿದೆ. ಈ ಕೃತ್ಯಕ್ಕೆ ಕಾಣದ ಕೈಗಳು ಕೆಲಸ ಮಾಡಿವೆ. ಈ ಘಟನೆಯಿಂದ ಬಾಲಕಿ ಕುಟುಂಬ ಮತ್ತು ಸಮಾಜಕ್ಕೆ ನೋವುಂಟಾಗಿದೆ. ಪೊಲೀಸರು ಯುವತಿಯನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದರ ಬಗ್ಗೆಯೂ ಸ್ಪಷ್ಟನೆ ನೀಡಬೇಕು. ಕೂಡಲೇ ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸಾಂತ್ವಾನ ಕೇಂದ್ರದ ಇಲಾಖೆಯ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಬೇಕು. ಬಾಲಕಿಯ ಕುಟುಂಬದ ಸದಸ್ಯರಿಗೆ ನ್ಯಾಯ ಒದಗಿಸಬೇಕು. ಪ್ರಕರಣ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಲಾಯಿತು.

ಸಮಾಜದ ಪ್ರಮುಖರಾದ ಹೋಬಳಿ ಘಟಕ ಅಧ್ಯಕ್ಷ ಶ್ಯಾಮಣ್ಣ ಕುರುಕುಂದ, ದುರುಗಪ್ಪ ಕುರುಕುಂದ, ಹನುಮೇಶ ತಿಡಿಗೋಳ, ಪ್ರಕಾಶ ಮಲ್ಲದಗುಡ್ಡ, ಶೇಖರಪ್ಪ, ರವಿ ಗುಂಜಳ್ಳಿ, ಅಂಬಣ್ಣ ಗುಂಜಳ್ಳಿ, ಆನಂದ ಆಯನೂರು, ಶ್ಯಾಮಮ್ಮ, ದುರುಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net