ಮೈಸೂರು: ಪುತ್ರನ ಅಗಲಿಕೆ ನೋವು ತಾಳಲಾರದೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೂರ್ಗಳ್ಳಿಯಲ್ಲಿ ನಡೆದಿದೆ.
ಭಾಗ್ಯಮ್ಮ (46) ಮೃತರು. ಜೂ.9ರಂದು ರಾಮಕೃಷ್ಣನಗರದಲ್ಲಿ ವಾಸಿಸುತ್ತಿದ್ದ ಭಾಗ್ಯಮ್ಮ ಅವರ ಮಗಳು ವಿದ್ಯಾ ಹಾಗೂ ಅಳಿಯ ರವಿಚಂದ್ರ ನಡುವೆ ವರದಕ್ಷಿಣೆ ವಿಚಾರಕ್ಕೆ ಜಗಳವಾಗಿತ್ತು.
ತನ್ನ ತಂಗಿ ಮೇಲೆ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಲು ಅಭಿಷೇಕ್ ತೆರಳಿದಾಗ ಆತನನ್ನು ರವಿಚಂದ್ರ ಚಾಕುವಿನಿಂದ ಇರಿದು ಕೊಂದಿದ್ದ. ಅಂದಿನಿಂದ ಮಗನ ನೆನಪಲ್ಲಿಯೇ ತಾಯಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಸೋಮವಾರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.