

ವಿಜಯವಾಣಿ ಸುದ್ದಿಜಾಲ,ಆರ್ಡಿ
ಜನರು ಕೃಷಿ ಕಾರ್ಯಗಳಿಂದ ಹಿಂದೆ ಸರಿಯುತ್ತಿರುವ ಇತ್ತೀಚಿನ ದಿನಗಳಲ್ಲಿ ಯುವ ಜನತೆಗೆ ಸ್ಫೂರ್ತಿ ನೀಡುತ್ತಿರುವ ಕೆಸರಲ್ಲೊಂದು ದಿನ ಗಮ್ಮತ್ ಕಾರ್ಯಕ್ರಮವು ಮಹತ್ವ ಪಡೆಯುತ್ತಿದೆ. ಯುವ ಜನತೆ ಕೃಷಿಯ ಬಗ್ಗೆ ಹೆಚ್ಚಿನ ಅಸಕ್ತಿ ಹೊಂದಿದಾಗ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ವಾಜಿ ಉಪಾಧ್ಯಕ್ಷ ನಿವೃತ್ತ ಶಿಕ್ಷಕ ಬಾಬು ಶೆಟ್ಟಿ ಜಗಲ್‌ಗುಡ್ಡೆ ಹೇಳಿದರು.
ಆರ್ಡಿ ಕೆಳ್‌ಮಲ್ಗದ್ದೆಯಲ್ಲಿ ಆರ್ಡಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ನಡೆದ ಪ್ರಥಮ ವರ್ಷದ ಕೆಸರಲ್ಲೊಂದು ದಿನ ಗಮ್ಮತ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಮನೋಹರ ಹೆಗ್ದೆ ನೂಜಟ್ಟು, ಕೆರ್ಜಾಡಿ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಯಾನಂದ ಆರ್ ಶೆಟ್ಟಿ ಕೆರ್ಜಾಡಿ, ಪ್ರಮುಖರಾದ ಗೋಪಾಕೃಷ್ಣ ಶಾಸ್ತ್ರಿ, ಜಯದೇವ ಹೆಗ್ಡೆ, ವಸಂತ ಶೆಟ್ಟಿ, ಕರುಣಾಕರ ಶೆಟ್ಟಿ, ರಂಗ ಪಾಣ, ಶಂಕರ ಶೆಟ್ಟಿ, ದಯಾನಂದ ಪೂಜಾರಿ, ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಮತ್ತಿತರರು ಇದ್ದರು.
* ಸವಾರೋಪ ಸಮಾರಂಭದಲ್ಲಿ ಶ್ರೀಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಆರ್ಡಿ ಒಕ್ಕೂಟದ ಅಧ್ಯಕ್ಷ ಕೃಷ್ಣ ಪುತ್ರನ್ ಆರ್ಡಿ, ಕೃಷ್ಣಮೂರ್ತಿ ಕಾಮತ್ ಕೊಂಜಾಡಿ, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ.ಸಂಜೀವ ಆರ್ಡಿ, ಜಯರಾಮ ಶೆಟ್ಟಿ ಆರ್ಡಿ, ಸುದೀಪ್ ಹೆಗ್ಡೆ ಶೇಡಿಮನೆ, ಸಂತೋಷ ಶೆಟ್ಟಿ ಆರ್ಡಿ, ಅರ್ಚನಾ ಶೆಟ್ಟಿ ಆರ್ಡಿ ಉಪಸ್ಥಿತರಿದ್ದರು.
ಮಕ್ಕಳು, ಮಹಿಳೆಯರು, ಪುರುಷರಿಗಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುವಾನ ನೀಡಲಾಯಿತು.
ಪ್ರಹ್ಲಾದ ಶೆಟ್ಟಿ ಆರ್ಡಿ ಸ್ವಾಗತಿಸಿ, ಗಣಪತಿ ಆರ್ಡಿ ವಂದಿಸಿದರು. ಸುರೇಶ್ ಶೆಟ್ಟಿ ಪ್ರಾಸ್ತಾವಿಸಿದರು. ಸುದರ್ಶನ್ ಶೆಟ್ಟಿ ನಿರೂಪಿಸಿದರು. ಶರತ್ ಶೆಟ್ಟಿ, ವಿನಯ ಶೆಟ್ಟಿ, ರಮೇಶ್ ಶೆಟ್ಟಿ ಸಹಕರಿಸಿದರು.