ನಿರಂತರ ಅಧ್ಯಯನದಿಂದ ಮಾತ್ರ ಯಶಸ್ಸು ಸಾಧ್ಯ

hbr (1)
Published on

ಹೆಬ್ರಿ: ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದ ಜೀವನದಲ್ಲಿ ಪ್ರೌಢಶಾಲಾ ಶಿಕ್ಷಣ ಅತ್ಯಂತ ಮಹತ್ವದ ಘಟ್ಟ. ಈ ಹಂತದಲ್ಲಿಯೇ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ನಿರ್ಧರಿಸಬೇಕು. ಹೈಸ್ಕೂಲ್‌ನಲ್ಲಿ ಗುರಿ ಸ್ಪಷ್ಟವಾಗಿದ್ದರೆ, ಪಿಯುಸಿ ಹಂತದಲ್ಲಿ ವಿಷಯ ಆಯ್ಕೆ ಮಾಡುವಾಗ ದಿಕ್ಕು ತಪ್ಪದೆ ಸುಲಭವಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತದೆ. ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರವು ಉತ್ತಮ ಅಂಕ ಪಡೆಯಲು ನೆರವಾಗುತ್ತದೆ. ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ ಎಂದು ಶಾಂತಿನಿಕೇತನ ಸಂಸ್ಥಾಪಕ ರಾಜೇಶ್ ಹೇಳಿದರು.

ಶಾಂತಿನಿಕೇತನ ಸಹಯೋಗದಲ್ಲಿ ಉದ್ಯಮಿ ರಾಜೇಶ್ ನಾಯಕ್ ಕೊಡುಗೆಯಾಗಿ ಹೆಬ್ರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗಕ್ಕೆ ನೀಡಿದ, ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರವನ್ನು ಶನಿವಾರ ವಿತರಿಸಿ ಮಾತನಾಡಿದರು.

ಉಪ ಪ್ರಾಂಶುಪಾಲ ದಿವಾಕರ ಮರಕಾಲ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾನಿಗಳು ನೀಡಿದ ಕೊಡುಗೆಯನ್ನು ಶಾಲೆಯಲ್ಲಿ ಸಮರ್ಥವಾಗಿ ಬಳಸಿಕೊಳ್ಳುತ್ತೇವೆ. ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಪಡೆಯಲು ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರವು ನೈತಿಕ ಬೆಂಬಲ ನೀಡಲಿದೆ. ಕಳೆದ ವರ್ಷ ಇದು ಅನೇಕ ವಿದ್ಯಾರ್ಥಿಗಳಿಗೆ ಉಪಯೋಗವಾಗಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಶಾಂತಿನಿಕೇತನದ ಅಧ್ಯಕ್ಷ ಮಹೇಶ್, ವಿಜಯವಾಣಿ ವರದಿಗಾರ ನರೇಂದ್ರ ಎಸ್.ಮರಸಣಿಗೆ, ಶಿಕ್ಷಕ ಜಗದೀಶ್ ಭಂಡಾರಿ, ವಿದ್ಯಾರ್ಥಿ ಘಟಕದ ನಿತಿನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net