ಚಾರಣಕ್ಕೆ ಬಂದಿದ್ದ ಯುವಕ ನಾಪತ್ತೆ

Published on

ರಾಮನಗರ: ಸ್ನೇಹಿತರ ಜೊತೆ ಚಾರಣಕ್ಕೆ ಬಂದಿದ್ದ ಉತ್ತರ ಪ್ರದೇಶ ಮೂಲದ ಯುವಕ ನಾಪತ್ತೆ ಆಗಿರುವ ಘಟನೆ ಮಾಗಡಿ ತಾಲೂಕು ಸಾವನದುರ್ಗದಲ್ಲಿ ನಡೆದಿದೆ.

ಏಕಶಿಲಾ ಬೆಟ್ಟ ಸಾವನದುರ್ಗ ಚಾರಣಿಗರ ಪಾಲಿಗೆ ಸ್ವರ್ಗವಾಗಿದ್ದು, ಸಾಲು ಸಾಲು ರಜೆ ಇದ್ದ ಕಾರಣ ಭಾನುವಾರ  ಸ್ನೇಹಿತನೊಂದಿಗೆ ಉತ್ತರ ಪ್ರದೇಶ ಮೂಲದ ಗಗನ್ ದೀಪ್ ಸಿಂಗ್ (30) ಚಾರಣಕ್ಕೆ ಬಂದಿದ್ದಾರೆ. ಈ ವೇಳೆ ನಾಪತ್ತೆಯಾಗಿದ್ದು, ಗಗನ್ ಸ್ನೇಹಿತ ಬೆಟ್ಟದಿಂದ ಇಳಿದು ಬಂದು ಪೊಲೀಸರು ಮತ್ತು ಅರಣ್ಯ ಸಿಬ್ಭಂದಿಗೆ ನಾಪತ್ತೆ ಸಂಬಂಧ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಗಗನ್  ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಭಾನುವಾರ ಮಧ್ಯಾಹ್ನದಿಂದಲೂ ನಾಪತ್ತೆ ಆಗಿರುವ ಗಗನ್ ಗಾಗಿ ಹುಡುಕಾಟ ನಡೆದಿದ್ದು, ಈವರೆವಿಗೂ ಸುಳಿವು ಪತ್ತೆ ಆಗಿಲ್ಲ. ಪತ್ತೆಗೆ ಡ್ರೋಣ್ ಸಹ ಬಳಕೆ ಮಾಡಲಾಗಿದೆಯಾದರೂ ಇನ್ನು ಯುವಕ ಪತ್ತೆ ಆಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net