ನನಗೆ ಮದ್ವೆ ಮಾಡಿ ಎಂದು ಪೀಡಿಸುತ್ತಿದ್ದ 22ರ ಯುವಕನ ದುರಂತ ಅಂತ್ಯ!

Suicide
Published on

ಮೈಸೂರು: ಆತನ ವಯಸ್ಸಿನ್ನೂ 22. ದಾಂಪತ್ಯ ಜೀವನಕ್ಕೆ ಕಾಲಿಡುವ ಕಾತರದಲ್ಲಿದ್ದ ಆತ ತನಗೆ ಮದುವೆ ಮಾಡಿ ಎಂದು ಪಾಲಕರನ್ನು ಪೀಡಿಸುತ್ತಿದ್ದ. ಮಗನ ಆಸೆ ಈಡೇರಿಸಲೆಂದು ಹೆಣ್ಣು ಹುಡುಕಾಟ ಆರಂಭಿಸಿದ್ದ ಪಾಲಕರು, ಮೊದಲು ಮನೆ ಕಟ್ಟೋಣ. ಆ ನಂತರ ಮದುವೆ ಮಾಡಿದರಾಯ್ತು... ಅಂದುಬಿಟ್ಟರು. ಮುಂದೆ ದೊಡ್ಡ ದುರಂತವೇ ಸಂಭವಿಸಿಬಿಟ್ಟಿತು!

ಹೌದು, ಮನೆಯವರು ಮದುವೆ ಮಾಡಲು ತಡ ಮಾಡುತ್ತಾರೆ ಎಂದು ನೊಂದ ಆ ಯುವಕ ಸಾವಿನ ಕದ ತಟ್ಟಿದ್ದಾನೆ. ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ ಮಹಮದ್ ಸಲ್ಮಾನ್ (22) ಮೃತ.

ಮದುವೆ ಮಾಡುವಂತೆ ಮಹಮದ್‌ ಸಲ್ಮಾನ್ ಹಲವು ಬಾರಿ ಪಾಲಕರನ್ನು ಒತ್ತಾಯಿಸಿದ್ದ. ಆತನ ಒತ್ತಡಕ್ಕೆ ಬೇಸತ್ತ ಪಾಲಕರು ಹುಡುಗಿಯನ್ನು ನೋಡಲು ಆರಂಭಿಸಿದ್ದರು. ಈ ಮಧ್ಯೆ ಮನಸ್ಸು ಬದಲಾಯಿಸಿದ ಪಾಲಕರು ಸದ್ಯಕ್ಕೆ ಮದುವೆ ಬೇಡ ಎಂದಿದ್ದರು. ಮೊದಲು ಮನೆ ಕಟ್ಟುವ, ಆಮೇಲೆ ಮದುವೆ ಮಾಡುತ್ತೇವೆ ಎಂದಿದ್ದರು. ಇದೇ ಕಾರಣಕ್ಕೆ ಮನನೊಂದ ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net