

ನೆಲಮಂಗಲ: ನೀರು ಕೇಳುವ ನೆಪದಲ್ಲಿ ಮನೆಯೊಂದಕ್ಕೆ ನುಗ್ಗಿದ ಯುವಕ ಮಹಿಳೆಯ ಮೇಲೆ ಕೈ ಹಾಕಿ, ಈಗ ಪೊಲೀಸರ ಪಾಲಾಗಿದ್ದಾನೆ. ಗುಲ್ಬರ್ಗದ ಸಿದ್ಧಾಪುರ ಮೂಲದ ಮಾರುತಿ ಎಂಬಾತನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಟಿ.ಬೇಗೂರಿನಲ್ಲಿ ಈ ಘಟನೆ ಸಂಭವಿಸಿದೆ. ಮದ್ಯಪಾನ ಮಾಡಿ ಅಮಲಿನಲ್ಲಿದ್ದ ಮಾರುತಿ, ನೀರು ಬೇಕೆಂದು ಹನುಮಕ್ಕ ಎಂಬಾಕೆ ವಾಸವಿದ್ದ ಬಾಡಿಗೆ ಮನೆಯೊಂದರ ಬಳಿ ಹೋಗಿದ್ದಾನೆ.
ಮಹಿಳೆ ನೀರು ತರಲು ಹೋದಾಗ ಒಳಕ್ಕೆ ನುಗ್ಗಿದ ಈತ ಸರ ಕದಿಯಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಸ್ಥಳೀಯರು ಈತನನ್ನು ಹಿಡಿದು ಹೊಡೆದು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.