

ಮೂಡುಬಿದಿರೆ: ನೆಲ್ಲಿಕಾರು ಗ್ರಾಪಂ ವ್ಯಾಪ್ತಿಯ ಮಾಂಟ್ರಾಡಿ ಕೊಂಬೆಟ್ಟುವಿನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ದುರ್ಘಟನೆಯಲ್ಲಿ ಕೊಂಬೆಟ್ಟು ನಿವಾಸಿ ರಾಜೇಶ್(38) ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
ಅವರು ಟ್ರ್ಯಾಕ್ಟರ್ ತೊಳೆಯಲ್ಲೆಂದು ಬೇರೆ ಕಡೆಗೆ ಚಲಾಯಿಸುತ್ತಿದ್ದಾಗ, ಅದು ರಿವರ್ಸ್ ಹೋಗಿ ಬಾವಿಯ ಕಡೆಗೆ ಚಲಿಸಲಾರಂಭಿಸಿತು. ಟ್ರ್ಯಾಕ್ಟರ್ ಬಾವಿ ಗೋಡೆಗೆ ಡಿಕ್ಕಿ ಹೊಡೆದು ಬಾವಿಗೆ ಬಿದ್ದಿದೆ, ಅದರಲ್ಲಿದ್ದ ರಾಜೇಶ್ ಪ್ರಾಣ ಕಳೆದುಕೊಂಡಿದ್ದಾರೆ. ರಾಜೇಶ್ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.