young man died ಕೆನೋಪಿಯಿಂದ ಆಯತಪ್ಪಿ ಬಿದ್ದ 35 ವರ್ಷದ ಸರ್ವೇಯರ್‌ ಸಾವು

young man died
Published on

ಭಟ್ಕಳ: ಮನೆಯ ಕೆನೋಪಿಯಲ್ಲಿ ಆಯತಪ್ಪಿ ಬಿದ್ದು ಅಧಿಕ ರಕ್ತಸೊರಿಕೆಯಿಂದ ಆಸ್ಪತ್ರೆ ಸೇರಿದ್ದ (young man died.) ಯುವಕನೊರ್ವ ಮೃತಪಟ್ಟ ಘಟನೆ  ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ನಸುಕಿನ 1.30ಕ್ಕೆ ನಡೆದಿದೆ. ಕುಮಟಾದ ಗಾಂಧಿನಗರದ ನಿವಾಸಿ (ಪ್ರಸ್ತುತ ಮುರ್ಡೇಶ್ವರ ವಾಸಿಸುತ್ತಿದ್ದ) ಅನೂಪ ನಾಗೇಶ ಶೆಟ್ಟಿ(35) ಮೃತ ಯುವಕ. ಇವರು ಭಟ್ಕಳದ ಸರ್ವೇ ಕಚೇರಿಯಲ್ಲಿ ಸರ್ವೇಯರ್ ಆಗಿ ವೃತ್ತಿ ಮಾಡುತ್ತಿದ್ದರು.

young man died

ಹೆಂಡತಿ ಮಕ್ಕಳೊಂದಿಗೆ ಮುರ್ಡೇಶ್ವರದ ಸಣಬಾವಿಯ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಗುರುವಾರ ರಾತ್ರಿ 10:00 ಗಂಟೆ ಸುಮಾರಿಗೆ ವಾಸವಿದ್ದ ಬಾಡಿಗೆ ಮನೆಯ ಕೆನೋಪಿಯಲ್ಲಿ  ಆಯ ತಪ್ಪಿ ಬಿದ್ದರು.

ಮನೆಯ ಮುಂಬದಿಯ ಕಿಟಕಿಯ ಮೇಲೆ ಕೈ ಉರಿ ಗಾಜಿನ ಮೇಲೆ ಬಿದ್ದ ಪರಿಣಾಮ ಅವರ ಬಲಗೈ ಮುಂಗೈ ಮೇಲಿನ ರಕ್ತ ನಾಳಕ್ಕೆ ಗಾಯವಾಗಿ ರಕ್ತ ಸ್ರಾವವಾಗಿದೆ. ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ವಿಪರೀತ ರಕ್ತ ಸ್ರಾವವಾಗಿ ಶುಕ್ರವಾರ ನಸುಕಿನ ಜಾವ ಮೃತಪಟ್ಟಿದ್ದಾರೆ. ಈ ಕುರಿತು ಮೃತರ ತಂದೆ ನಾಗೇಶ ಶೆಟ್ಟಿ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net