ಜಾತಿ ಕಾರಣಕ್ಕೆ ಪ್ರೇಮ ವೈಫಲ್ಯ; 'ತುಂಬಾ ನೆನಪಾಗ್ತಿದಿಯ..' ಅಂತ ಆಡಿಯೊ ಮೆಸೇಜ್ ಕಳಿಸಿ ನೇಣು ಹಾಕೊಂಡ ಯುವಕ..

Love 2
Published on

ಬೆಂಗಳೂರು: ಪ್ರೇಮ ವೈಫಲ್ಯವಾಗಿದ್ದಕ್ಕೆ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯೋಣ ಅನಿಸ್ತಿದೆ, ಸಾಯೋಕೂ ಮನಸಿಲ್ಲ ಎಂದು ಆಡಿಯೋ ಮೆಸೇಜ್​ ಕಳಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಣಿಕಂಠ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮೊದಲು ಆಡಿಯೋ ಮೆಸೇಜ್ ಕಳಿಸಿರುವ ಯುವಕ, ತಾವು ಕಳೆದಿರುವ ಕ್ಷಣಗಳನ್ನೆಲ್ಲ ನೆನಪು ಮಾಡಿಕೊಂಡಿದ್ದು, ಜಾತಿಯ ಕಾರಣಕ್ಕೆ ಪ್ರೇಮ ಮುರಿದು ಬಿದ್ದಿದೆ ಎಂಬುದು ಆ ಮೂಲಕ ತಿಳಿದು ಬಂದಿದೆ.

ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ಈತ ಆರು ತಿಂಗಳಿನಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇತ್ತೀಚೆಗಷ್ಟೇ ಆಕೆ ಈತನನ್ನು ಬಿಟ್ಟು ಹೋಗಿದ್ದಾಳೆ. ಆದರೆ ಬಿಟ್ಟು ಹೋದ ಅವಳನ್ನು ಮರೆಯಲಿಕ್ಕೆ ಆಗುವುದಿಲ್ಲ, ನೆನಪಾಗುತ್ತಿದ್ದಿಯ ಎಂದು ಹೇಳಿ ಆಡಿಯೋ ಮೆಸೇಜ್ ಕಳಿಸಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮಡಿವಾಳ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net