ಜ್ವರದಿಂದ ಬಳಲುತ್ತಿದ್ದ ಯುವತಿ ಸಾವು

Published on

ಅರಸೀಕೆರೆ ಗ್ರಾಮಾಂತರ: ಜ್ವರದಿಂದ ಬಳಲುತ್ತಿದ್ದ ತಾಲೂಕಿನ ಜಾವಗಲ್ ಗ್ರಾಮದ ಲಕ್ಷ್ಮೀಪುರ ಬಡಾವಣೆ ಯುವತಿ ಮೃತಪಟ್ಟಿದ್ದಾಳೆ.
ಬಡಾವಣೆಯ ರಾಜೇಶ್ ಹಾಗೂ ಲತಾಮಣಿ ದಂಪತಿ ಪುತ್ರಿ ಲಿಖಿತಾ (18) ಮೃತಳು. ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಈಕೆಗೆ ಗ್ರಾಮದ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಜು.7ರಂದು ಜ್ವರದ ತೀವ್ರತೆ ಹೆಚ್ಚಿದ್ದರಿಂದ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಕ್ತ ಪರೀಕ್ಷಿಸಿದಾಗ ಡೆಂೆ ಲಕ್ಷಣ ಇರುವುದು ದೃಢಪಟ್ಟಿತ್ತು. ಯುವತಿ ಅದೇ ದಿನ ಸಂಜೆ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಯುವತಿ ನಿವಾಸಕ್ಕೆ ಶಾಸಕ ಎಚ್.ಕೆ.ಸುರೇಶ್, ತಹಸೀಲ್ದಾರ್ ಸಂತೋಷ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ತಿಮ್ಮಯ್ಯ, ಪಿಡಿಒ ರವಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net