ಕಾಞಂಗಾಡು ಯುವ ಇಂಜಿನಿಯರ್ ನಾಪತ್ತೆ

man missing
Published on

ಕಾಸರಗೋಡು: ಕಾಞಂಗಾಡು ಸೌತ್ ಮಾತೋಪ್ ಕ್ಷೇತ್ರ ಸನಿಹದ ನಿವಾಸಿ, ಯುವ ಇಂಜಿನಿಯರ್ ಪ್ರಣವ್(33) ಎಂಬುವರು ನಾಪತ್ತೆಯಾಗಿರುವ ಬಗ್ಗೆ ಹೊಸದುರ್ಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಮಧ್ಯೆ ಪ್ರಣವ್ ಅವರ ಮೊಬೈಲ್, ಚಪ್ಪಲಿ ಹಾಗೂ ಪತ್ರವೊಂದು ಬೇಕಲಕೋಟೆ ಸನಿಹದ ಕಡಪ್ಪುರದಲ್ಲಿ ಪತ್ತೆಯಾಗಿದೆ. ಮೊಬೈಲ್ ರಿಂಗಣಿಸುತ್ತಿರುವುದನ್ನು ಕೇಳಿ ಸ್ಥಳೀಯ ನಿವಾಸಿ ಬೇಕಲ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಮೊಬೈಲ್ ತಪಸಣೆ ನಡೆಸಿದಗ ಪ್ರಣವ್ ಅವರದ್ದೆಂದು ಪತ್ತೆಹಚ್ಚಲಾಗಿದೆ. ‘ಎಲ್ಲರೂ ನನ್ನನ್ನು ಕ್ಷಮಿಸಿ’ ಎಂಬ ಒಕ್ಕಣೆ ಪತ್ರದಲ್ಲಿದ್ದು, ಇವರು ಪತ್ರ ಬರೆದಿಟ್ಟಿರಬೇಕೆಂದು ಸಂಶಯಿಸಲಾಗಿದೆ.

ಪ್ರಣವ್ ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದರು. ಈ ಮಧ್ಯೆ ಸಮುದ್ರದಲ್ಲಿ ವ್ಯಕ್ತಿಯೊಬ್ಬರು ನೀರುಪಾಲಾಗಿರುವ ಬಗ್ಗೆ ಊಹಾಪೋಹ ಹರಡಿದೆ. ಪೊಲೀಸರು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಪ್ರಣವ್ ಅವರಿಗಾಗಿ ಹುಡುಕಾಟ ಮುಂದುವರಿಸಿದೆ. ಪ್ರಣವ್ ಗುರುವಾರ ಸಂಜೆಯಿಂದ ನಾಪತ್ತೆಯಾಗಿರುವ ಬಗ್ಗೆ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net