

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪ್ರೀತಿಸುತ್ತಿದ್ದ ಪ್ರೇಯಸಿ ಪೋಷಕರಿಗೆ ಹೆದರಿ ಕೈಕೊಟ್ಟಿದ್ದು ಮತ್ತು ಹುಡುಗಿಯ ಪೋಷಕರು ಹಾಗೂ ಗ್ರಾಮದ ಚೇರ್ಮನ್ ಇತರರು ಬೆದರಿಕೆ ಹಾಕಿದ್ದರಿಂದ ಘಾಸಿಗೊಂಡು ಅವರ ಕಿರುಕುಳ ತಾಳದೆ ಪ್ರೇಮಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ನೆಹರು ಗಂಜ್ ಬಳಿಯ ಬಂಬೂ ಬಜಾರದ ಮರಗಮ್ಮ ಗುಡಿ ಹತ್ತರಲ್ಲಿ ನಡೆದಿದೆ.
ಅಭಿಷೇಕ ಮಲ್ಲಿಕಾರ್ಜುನ ಬಿರಾದಾರ (೨೦) ಆತ್ಮಹತ್ಯೆ ಮಾಡಿಕೊಂಡ ಯುವಕ. ಟಂಟA ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮೂಲತಃ ಕೊರವಿ ಗ್ರಾಮದವರು. ಬಂಬೂಬಜಾರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಕಾಳನೂರ ಗ್ರಾಮದ ಯುವತಿ ಮತ್ತು ಅಭಿಷೇಕ ಪರಸ್ಪರ ಪ್ರೀತಿಸುತ್ತಿದ್ದರು. ಆಗಾಗ ಹುಡುನ ಮನೆಗೂ ಬಂದು ಹೋಗುತ್ತಿದ್ದಳು. ಆಗ ಯುವಕನ ತಾಯಿ, ಬಿಡುವಂತೆ ಬುದ್ದಿ ಹೇಳಿದ್ದರು. ಆದರೂ ಇಬ್ಬರ ಪ್ರೇಮ ಮುಂದುವರೆಸಿದ್ದರು. ಕೆಲ ದಿನಗಳ ಹಿಂದೆ ಯುವತಿ ಮನೆಯವರಿಗೆ ಗೊತ್ತಾಗಿ ಆತನಿಗೆ ಕರೆಸಿ ಬೆದರಿಕೆ ಹಾಕಿದ್ದರು. ಅಲ್ಲದೆ ಯುವತಿಗೂ ಬೆದರಿಕೆ ಹಾಕಿದ್ದರು. ಹೀಗಾಗಿ ಅಭಿಷೇಕನಿಗೆ ಕರೆ ಮಾಡಿ ನನ್ನ ಜತೆ ಮಾತನಾಡಬೇಡ. ಭೇಟಿಯಾಗಬೇಡ ಎಂದು ಹೇಳಿದ್ದಳಂತೆ.
ಅದಾಗ ಬಳಿಕ ಆತ ಮಾನಸಿಕವಾಗಿ ನೊಂದುಕೊAಡಿದ್ದ. ಸುಸ್ತಾಗಿ ಕುಳಿತುಕೊಳ್ಳುತ್ತಿದ್ದ. ಅಲ್ಲದೆ ಹುಡುಗಿ ಕಡೆಯವರು ಕರೆದು ಕಮಲನಗರದ ವ್ಯಕ್ತಿಯಿಂದ ಬೆದರಿಕೆ ಹಾಕಿಸಿದ್ದರು. ಹೀಗಾಗಿ ಬೆದರಿಕೆಯಿಂದ ನೊಂದುಕೊAಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗ ಶರಣಾಗಿದ್ದಾನೆ. ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.