

ಬೈಂದೂರು: ಇಂದಿನ ಒತ್ತಡದ ಬದುಕಿಗೆ ಯೋಗ ಮಾಡುವುದು ಅಗತ್ಯ. ಹಾಗಾಗಿ ಎಲ್ಲರು ದಿನನಿತ್ಯ ಯೋಗ ಮಾಡಿ ನಿರೋಗಿಗಳಾಗಿ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ ಕರೆ ನೀಡಿದರು. ಉಡುಪಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಯುಷ್ಮಾನ್ ಆರೋಗ್ಯ ಮಂದಿರ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು ಆಶ್ರಯದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಯೋಗೋತ್ಸವ, ಯೋಗ ತರಬೇತಿ-ಆಯುಷ್ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಶಿಕ್ಷಕ, ಯೋಗ ಶಿಕ್ಷಕ ನಾರಾಯಣ ದೇವಾಡಿಗ ಯೋಗದ ಮಹತ್ವ ತಿಳಿಸಿ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಯೋಗ ತರಬೇತಿ ನೀಡಿದರು. ನಂತರ ಯೋಗ, ಐಇಸಿ ಕರಪತ್ರ ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಉಷಾ ನಿರೂಪಿಸಿದರು. ಮೇಲ್ವಿಚಾರಕಿ ರೇವತಿ ವಂದಿಸಿದರು.
ಇಂದಿನ ಅಸಮರ್ಪಕ ಜೀವನ ಶೈಲಿ, ಆಹಾರದಿದಾಗಿ ಅನೇಕ ಕಾಯಿಲೆಗಳು ಮಾನವನನ್ನು ಕಾಡುತ್ತಿದೆ. ನಮ್ಮ ಜೀವನಶೈಲಿ ಬದಲಾವಣೆಯಿಂದ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ. ಅದಕ್ಕೆ ಯೋಗ ಅತ್ಯಂತ ಪ್ರಯೋಜನಕಾರಿ. ಹಾಗಾಗಿ ಯೋಗ ಮಾಡುವುದರ ಜತೆಗೆ ಆಯುರ್ವೇದ ದಿನಚರ್ಯೆ, ಋತುಚರ್ಯೆ ಪಾಲಿಸಿ.-ಡಾ.ವೀಣಾ ಕಾರಂತ್ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ