ವಿದ್ಯಾರ್ಥಿಗಳಿಗೆ ಯೋಗ, ಧ್ಯಾನ ಕಲಿಕೆ ಅಗತ್ಯ: ಶಿಕ್ಷಕ ನಾಗರಾಜ ದಂಡಾವತಿ ಸಲಹೆ

ವಿದ್ಯಾರ್ಥಿಗಳು ಇಂದು ಒತ್ತಡದಲ್ಲಿಯೇ ಓದು, ಕಲಿಕೆ ಮಾಡುತ್ತಿದ್ದು ಅವರಿಗೆ ಯೋಗ, ಧ್ಯಾನ ಕಲಿಸುವ ಅನಿವಾರ್ಯತೆಯಿದೆ ಎಂದು ಯೋಗ ಶಿಕ್ಷಕ ನಾಗರಾಜ್ ದಂಡಾವತಿ ಹೇಳಿದರು.
IMG-20231006-WA0007
Published on

ವಿಜಯವಾಣಿ ಸುದ್ದಿಜಾಲ ಚಿತ್ತಾಪುರ

ವಿದ್ಯಾರ್ಥಿಗಳು ಇಂದು ಒತ್ತಡದಲ್ಲಿಯೇ ಓದು, ಕಲಿಕೆ ಮಾಡುತ್ತಿದ್ದು ಅವರಿಗೆ ಯೋಗ, ಧ್ಯಾನ ಕಲಿಸುವ ಅನಿವಾರ್ಯತೆಯಿದೆ ಎಂದು ಯೋಗ ಶಿಕ್ಷಕ ನಾಗರಾಜ್ ದಂಡಾವತಿ ಹೇಳಿದರು.
ತಾಲೂಕಿನ ಕರದಾಳ ಗ್ರಾಮದ ಕಸ್ತೂರಿಬಾ ಗಾಂಧಿ ವಸತಿ ಶಾಲೆಯ ಆವರಣದಲ್ಲಿ ಸರ್ಕಾರಿ ಯುನಾನಿ ಚಿಕಿತ್ಸಾಲಯ ಕರದಾಳ ಆಸ್ಪತ್ರೆ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಇಂದು ಮಕ್ಕಳು, ವಿದ್ಯಾರ್ಥಿಗಳು ಒತ್ತಡದಲ್ಲಿ ಕಲಿಯುವ ಪರಿಸ್ಥಿತಿಯಿದೆ. ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಬದುಕಿನಲ್ಲಿ ಯಶಸ್ಸು ಗಳಿಸಲು ಯೋಗ, ಧ್ಯಾನ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ತರಬೇತಿ ಬಹಳ ಅವಶ್ಯಕವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಓಂಕಾರ, ಪ್ರಾಣಾಯಾಮ, ವೃಕ್ಷಾಸನ, ತಾಡಾಸನ, ಪದ್ಮಾಸನ, ಸಿದ್ಧಾಸನ, ಶಿರಸಾಸನ,
ವಜ್ರಾಸನ, ಮುದ್ರಾ ಯೋಗ,ಸೇರಿದಂತೆ ವಿವಿಧ ಯೋಗದ ಆಸನಗಳ ಬಗ್ಗೆ ತಿಳಿಸಿದರು.

ವಸತಿ ಶಾಲೆಯ ಮುಖ್ಯೋಪಾಧ್ಯಾಯನಿ ಶೋನುಬಾಯಿ ಚೌಹಾಣ್ ಮಕ್ಕಳ ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸುಜಾತ ದೈಹಿಕ ಶಿಕ್ಷಕಿ, ಹಾಗೂ ವಿದ್ಯಾರ್ಥಿನಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net