ಚಿತ್ತ ಪ್ರಸನ್ನತೆ ಕಾಪಾಡಲು ಯೋಗ ಸಹಕಾರಿ: ಕುಶಾಲಪ್ಪ ಗೌಡ ನೆಕ್ಕರಾಜೆ ಅನಿಸಿಕೆ

Bel_Yoga
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಚಿತ್ತ ಪ್ರಸನ್ನತೆಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಯೋಗದಿಂದ ಸಾಧ್ಯವಿದೆ ಎಂದು ಮಂಗಳೂರು ಆವಿಷ್ಕಾರ್ ಯೋಗ ತರಬೇತಿ ಕೇಂದ್ರದ ಸ್ಥಾಪಕ ಕುಶಾಲಪ್ಪ ಗೌಡ ನೆಕ್ಕರಾಜೆ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಯೋಗ ಕಾಲ, ದೇಶ, ಜಾತಿ ಧರ್ಮವನ್ನು ಮೀರಿ ಬೆಳೆದಿದ್ದು ವಿಶ್ವ ಮಾನ್ಯತೆಯನ್ನು ಪಡೆದಿದೆ. ಮಾನಸಿಕ ಸ್ಥಿರತೆಯನ್ನು ಕಾಪಾಡುವ ಯೋಗ ಎಲ್ಲ ವಿದ್ಯೆಗಳಂತೆ ಮಹತ್ವ ಪಡೆದಿದೆ. ಇವತ್ತಿನ ಕಾಲದಲ್ಲಿ ಸಂಕಲ್ಪಬದ್ಧರಾಗಿ ನಿರಂತರ ಅಭ್ಯಾಸದಿಂದ ಯೋಗವನ್ನು ಅನುಷ್ಠಾನ ಮಾಡಿಕೊಳ್ಳುವುದರಿಂದ ಉನ್ನತ ಆರೋಗ್ಯದೊಂದಿಗೆ ಉತ್ತಮ ಉದ್ಯೋಗ ಗಳಿಸಬಹುದು ಎಂದರು.

ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕ ಶಶಿಧರ್ ಮಾಣಿ, ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಯದುಪತಿ ಗೌಡ ಸ್ವಾಗತಿಸಿದರು. ಕ್ರೀಡಾ ಸಯೋಜಕ ವಿನೀಶ್ ವಂದಿಸಿದರು. ಉಪನ್ಯಾಸಕ ಸುಧೀರ್ ಕೆ.ಎನ್.ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net