

ಸುಳ್ಯ: ಸಿದ್ಧಿವಿನಾಯಕ ಸೇವಾ ಸಮಿತಿ ಮತ್ತು ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಆಶ್ರಯದಲ್ಲಿ ಸೆ.7ರಿಂದ 11ರತನಕ ನಡೆಯಲಿರುವ 56ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪೂರ್ವಭಾವಿ ಸಭೆ ಕಲ್ಕುಡ ದೈವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮದ ರೂಪರೇಷೆ ಕುರಿತು ಚರ್ಚಿಸಲಾಯಿತು. ವಿವಿಧ ಜವಾಬ್ದಾರಿಯನ್ನು ಸಮಿತಿ ಸದಸ್ಯರಿಗೆ ಹಂಚಿಕೊಡಲಾಯಿತು.
ಸಮಿತಿ ಅಧ್ಯಕ್ಷ ದಿನೇಶ್ ಕುಮಾರ್ ಕೆ.ಸಿ, ಮುಖಂಡರಾದ ಪಿ.ಕೆ.ಉಮೇಶ್, ಸೋಮನಾಥ ಪೂಜಾರಿ, ಗೋಪಾಲಕೃಷ್ಣ ಕೆ.ಎಸ್, ದಾಮೋದರ ಮಂಚಿ, ಭರತ ಪಿ.ಯು, ಶಶಿಧರ ಎಂ.ಜೆ, ಬೆಳ್ಯಪ್ಪ ಗೌಡ, ಗುರುದತ್ ಶೇಟ್, ಕಿಶೋರಿ ಶೇಟ್, ಜನಾರ್ದನ ದೋಳ, ವಿಶ್ವನಾಥ ಕುಂಚಡ್ಕ, ಸುಪ್ರೀತ್ ಮೋಂಟಡ್ಕ, ಶೀನಪ್ಪ ಬಯಂಬು, ಶಿವರಾಮ ಕೇರ್ಪಳ, ಸುಧಾಕರ ಕೇರ್ಪಳ, ನಾರಾಯಣ ಶಾಂತಿನಗರ, ಮಿಥುನ್ ಶಾಂತಿನಗರ ಮತ್ತಿತರರು ಉಪಸ್ಥಿತರಿದ್ದರು.