

ಗುತ್ತಲ: ಯೋಗದಿಂದ ರೋಗಗಳು ಮಾಯವಾಗುತ್ತವೆ. ನಿತ್ಯ ಯೋಗಾಸನ ಮಾಡುವುದರಿಂದ ರೋಗ ರಹಿತವಾಗಿ ಬದುಕನ್ನು ನಾವು ಹೊಂದಬಹುದು ಎಂದು ಗುದ್ದಲಿ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಹೊಸರಿತ್ತಿಯ ಜಿವಿಎಚ್ ಪ್ರೌಢಶಾಲಾ ಆವರಣದಲ್ಲಿ ಯೋಗ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತೀಯರು ವಿಶ್ವಕ್ಕೆ ಪರಿಚಯಿಸಿದ ಅನೇಕ ಕೊಡುಗೆಗಳಲ್ಲಿ ಯೋಗವು ಒಂದಾಗಿದೆ. ಪ್ರತಿಯೊಂದು ರೋಗಕ್ಕೆ ಯೋಗದಲ್ಲಿ ಮದ್ದಿದೆ. ನುರಿತ ಯೋಗ ಗುರುವಿನಿಂದ ಯೋಗವನ್ನು ಮಾಡುವುದನ್ನು ಕಲಿತಲ್ಲಿ ನಿಮಗೆ ಹಣ, ಸಮಯ ಉಳಿತಾಯದೊಂದಿಗೆ. ಸದೃಢ ದೇಹ ಮನಸು ನಿಮ್ಮದಾಗಲಿದೆ ಎಂದು ಯೋಗದ ಮಹತ್ವವನ್ನು ತಿಳಿಸಿದರು.
ಪ್ರೇರಣಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಯೋಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಜಿ.ಪಿ. ಕೋರಿ ಸ್ವಾಗತಿಸಿದರು. ಯೋಗ ಶಿಕ್ಷಕ ಎಸ್.ಬಿ. ಮಠದ ನಿರೂಪಿಸಿದರು. ಅರುಣಕುಮಾರ ಶೆಟ್ಟರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಕೆ.ಸಿ ಕೋರಿ, ಗಿರೀಶ ಅಂಕಲಕೋಟಿ, ಚಂದ್ರಶೇಖರ ಅರಳಿಹಳ್ಳಿ, ಸಿದ್ದಣ್ಣ ಹಳ್ಳಿಕೇರಿ, ಎಸ್.ಸಿ ಶೆಟ್ಟರ್, ಎಫ್.ಐ. ಶಿಗ್ಲಿ, ಶಂಭಣ್ಣ ಅರಳಿ ಇದ್ದರು.