ಪ್ರಾಚೀನ ಭಾರತದ ಕೊಡುಗೆ ಯೋಗ

hbr (5)
Published on

ಹೆಬ್ರಿ: ಕ್ರೀಡಾ ಭಾರತಿ ಹೆಬ್ರಿ ತಾಲೂಕು ಘಟಕ ಹಾಗೂ ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು.

ಹೆಬ್ರಿ ಬಾಲಕೃಷ್ಣ ಮಲ್ಯ ಉದ್ಘಾಟಿಸಿ, ಪ್ರಾಚೀನ ಭಾರತದ ಕೊಡುಗೆ ಯೋಗ. ಇಂದು ನರೇಂದ್ರ ಮೋದಿಯಿಂದ ವಿಶ್ವಮಟ್ಟದಲ್ಲಿ ಪ್ರಚಲಿತಗೊಂಡಿದೆ. ವಿಶ್ವ ಯೋಗ ದಿನವನ್ನು ವಿಶ್ವದ 190ಕ್ಕೂ ಹೆಚ್ಚು ದೇಶಗಳು ಆಚರಿಸುತ್ತಿವೆ ಎಂದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್, ಕ್ರೀಡಾ ಭಾರತಿ ಕಾರ್ಯದರ್ಶಿ ವಿಜಯ್ ಕುಮಾರ್ ಶೆಟ್ಟಿ, ಚೀಫ್ ವಾರ್ಡನ್ ನಿತಿನ್, ಕ್ರೀಡಾ ಭಾರತಿ ಸದಸ್ಯರಾದ ದೈಹಿಕ ಶಿಕ್ಷಕ ರವೀಂದ್ರ ಶೆಟ್ಟಿ, ಪ್ರವೀಣ್ ಹೆಗ್ಡೆ, ಪಾವನ ಶೆಟ್ಟಿ, ಮಾಲಿನಿ ಉಪಸ್ಥಿತರಿದ್ದರು. ವಿಜಯ್ ಕುಮಾರ್ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net