ಯೋಗದಿಂದ ದೈಹಿಕ ಸಾಮರ್ಥ್ಯ ವೃದ್ಧಿ : ಡಾ.ಸುಬ್ರಹ್ಮಣ್ಯ ಅನಿಸಿಕೆ

New Project (24)
Published on

ಬದಿಯಡ್ಕ: ಯೋಗ ಇಂದು ಬಹು ಆಯಾಮಗಳೊಂದಿಗೆ ವಿಶ್ವಾದ್ಯಂತ ವ್ಯಾಪಿಸಿದೆ. ಯೋಗದಿಂದ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಯೋಗ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಸುಬ್ರಹ್ಮಣ್ಯ ಪ್ಯೆಲೂರು ಹೇಳಿದರು.

ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಶನ್ ಆಫ್ ಕೇರಳದ ಜಿಲ್ಲಾ ಘಟಕ ವತಿಯಿಂದ ಶನಿವಾರ ಆಯೋಜಿಸಲಾದ ಯೋಗ ಉತ್ಸವ- 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಸಂದೀಪ್ ಬೇಕಲ್ ಮುಖ್ಯ ಅತಿಥಿಯಾಗಿದ್ದರು. ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಎಂ.ಅಬ್ಬಾಸ್, ಸುಕುಮಾರ ಕುದ್ರೆಪ್ಪಾಡಿ, ಜಯಂತಿ ಶುಭಹಾರೈಸಿದರು. ಶಿವಪ್ರಸಾದ್, ಶಾಮಿಲ್ ಮೋನ್ ಉಪಸ್ಥಿತರಿದ್ದರು. ರವಿಶಂಕರ ನೆಗಲಗುಳಿ ಸ್ವಾಗತಿಸಿದರು. ತೇಜಾಕುಮಾರಿ ಕಾಸರಗೋಡು ವಂದಿಸಿದರು. ಗಣೇಶ್ ಭಟ್ ಪೆರ್ವ ಹಾಗೂ ಡಾ.ವಿದ್ಯಾಲಕ್ಷ್ಮೀ ಬೇಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net