14ರಂದು ಯೋಗ ಶಿಕ್ಷಣ ಉಚಿತ ತರಬೇತಿ

Published on

ಸುಳ್ಯ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ಪುತ್ತೂರು ತಾಲೂಕು ದ.ಕ.ಜಿಲ್ಲೆ ಹಾಗೂ ಶ್ರೀ ವೆಂಕಟರಮಣ ದೇವ ಮಂದಿರ ಅಂಬಟೆಡ್ಕ ಸಹಯೋಗದಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಬೇತಿ ಜ.14ರಿಂದ ಅಂಬಟಡ್ಕದ ವೆಂಕಟರಮಣ ದೇವ ಮಂದಿರದಲ್ಲಿ ಆರಂಭಗೊಳ್ಳಲಿದೆ.

14ರಂದು ಬೆಳಗ್ಗೆ 6 ಗಂಟೆಗೆ ಉದ್ಘಾಟನೆ ನಡೆಯುವುದು. 15ರಿಂದ ಬೆಳಗ್ಗೆ 5ರಿಂದ 6.30ರ ತನಕ ನಿತ್ಯ ತರಗತಿಗಳು ನಡೆಯುವುದು. 10 ವರ್ಷ ಮೇಲ್ಪಟ್ಟ ಎಲ್ಲ ವಯಸ್ಸಿನ ಪುರುಷ ಹಾಗೂ ಮಹಿಳೆಯರು ಭಾಗವಹಿಸಬಹುದಾಗಿದೆ.

ಯೋಗ ಶಿಕ್ಷಣ ಪಡೆಯುವುದರಿಂದ ಉದ್ವೇಗ, ಒತ್ತಡ, ಖಿನ್ನತೆ ಶಮನಕ್ಕಾಗಿ, ಏಕಾಗ್ರತೆಗಾಗಿ, ನೆನಪಿನ ಶಕ್ತಿಯ ಚುರುಕಿಗಾಗಿ, ಸಂಧಿವಾತ ದೋಷ, ನಿದ್ರೆಯ ಸಮಸ್ಯೆ, ಆಸಿಡಿಟಿ, ಮೂಲವ್ಯಾಧಿ, ರಕ್ತದೊತ್ತಡ, ಗಂಟು ನೋವು, ಮೈಗ್ರೇನ್, ತಲೆನೋವು ಇತ್ಯಾದಿ ಸಮಸ್ಯೆಗಳ ಹತೋಟಿ ಮತ್ತು ನಿವಾರಣೆ ಸಿಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net