

ಪುತ್ತೂರು ಗ್ರಾಮಾಂತರ: ಜನರ ಆರೋಗ್ಯದ ದಷ್ಟಿಯಿಂದ ವಿದೇಶಿ ತಂತ್ರಜ್ಞಾನ ಬಳಸಿ ಮಲತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ ಬಳಕೆ ಮಾಡುವ ಮಲತ್ಯಾಜ್ಯ ಘಟಕ ಪ್ರತಿಗ್ರಾಮದಲ್ಲೂ ನಿರ್ಮಾಣ ವಾಡಲಾಗುತ್ತಿದೆ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಕೊಳ್ತಿಗೆ ಗ್ರಾಮದಲ್ಲಿ 93 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮಲತ್ಯಾಜ್ಯ ಘಟಕ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಶಿಲಾನ್ಯಾಸಗೈದು ಮಾತನಾಡಿದರು.
ಕೊಳ್ತಿಗೆ ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ವೆಂಕಟ್ರಮಣ ಗೌಡ, ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ವಾತನಾಡಿ, ಶಾಸಕರು ಎಲ್ಲ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಜತೆಗೆ ರಾಜಕೀಯ ರಹಿತವಾಗಿ ಅಭಿವದ್ಧಿಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದರು.
ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷೆ ಅಕ್ಕಮ್ಮ, ಉಪಾಧ್ಯಕ್ಷ ಪ್ರಮೋದ್ ಕೆ.ಎಸ್., ವಾಜಿ ಅಧ್ಯಕ್ಷ ಶ್ಯಾಮ್‌ಸುಂದರ್ ರೈ, ಸದಸ್ಯರಾದ ವಸಂತಕುವಾರ್ ರೈ ದುಗ್ಗಳ, ಯತೀಂದ್ರ ಕೊಚ್ಚಿ, ಪಿ.ಡಿ.ಒ. ಸುನಿಲ್, ಮಾಜಿ ತಾ.ಪಂ. ಸದಸ್ಯ ರಾಮ ಪಂಬಾರು, ಪಕ್ಷದ ಮುಖಂಡರಾದ ಯಶೋಧರ ಗೌಡ, ವಿಷ್ಣು ಭಟ್ ಎಕ್ಕಡ್ಕ, ಲಿಂಗಪ್ಪ ಪೂಜಾರಿ, ಪವನ್ ಡಿ.ಜಿ., ಚಂದ್ರಹಾಸ ರೈ ಬೋಳೋಡಿ, ಸತ್ತಾರ್ ಅಮಲ ಮತ್ತಿತರರಿದ್ದರು.