ಕಲಬುರಗಿಯಲ್ಲಿ ಯೋಗ ಜಾಗೃತಿ ನಡಿಗೆ ಯಶಸ್ವಿ

ಕಲಬುರಗಿ : ಹತ್ತನೇಯ ಅಂತರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಇಂದು ನಗರದಲ್ಲಿ ಆಯೋಜಿಸಿದ್ದ ಯೋಗ ಜಾಗೃತಿ ನಡಿಗೆಗೆ ಜಗತ್ ವೃತ್ತದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಚಾಲನೆ ನೀಡಿದರು.
IMG-20240620-WA0024
Published on

ಜಿಪಂ ಸಿಇಒ ಭಂವರಸಿಂಗ್ ಮೀನಾ ಚಾಲನೆ : ಜಗತ್ ನಿಂದ ಡಿಸಿ ಕಚೇರಿಯವರೆಗೂ ಹೆಜ್ಜೆ ಹಾಕಿದ ಜನರು

ಕಲಬುರಗಿ : ಹತ್ತನೇಯ ಅಂತರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಇಂದು ನಗರದಲ್ಲಿ ಆಯೋಜಿಸಿದ್ದ ಯೋಗ ಜಾಗೃತಿ ನಡಿಗೆಗೆ ಜಗತ್ ವೃತ್ತದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಚಾಲನೆ ನೀಡಿದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರತಿಕಾಂತ್ ಸ್ವಾಮಿ, ಆಯುಷ್ ಇಲಾಖೆಯ ಅಧಿಕಾರಿ ಡಾ ಗಿರಿಜಾ ಎಸ್ .ಯು. ಪತಂಜಲಿ ಯೋಗ ಸಮಿತಿ ಅಧ್ಯಕ್ಷರಾಗಿರುವ ಯೋಗಗ ಗುರು ಶಿವಾನಂದ ಸಾಲಿಮಠ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು
ಯೋಗ ನಡಿಗೆಯು ಜಗತ್ ವೃತ್ತದಿಂದ ಆರಂಭವಾಗಿ ಎಸ್.ವಿ.ಪಿ. ವೃತ್ತ ಮಾರ್ಗವಾಗಿ ಡಿ.ಸಿ. ಕಚೇರಿಗೆ ಮುಕ್ತಾಯವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net