ಆಗಸ್ಟ್​ ಮಧ್ಯಕ್ಕೆ ಹಳದಿ ಮಾರ್ಗ ಶುರು!

Yellow_Metro
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕೆ ಆರಂಭದಲ್ಲಿ 3 ರೈಲುಗಳಷ್ಟೇ ವಾಣಿಜ್ಯ ಸಂಚಾರ ನಡೆಸಲಿದೆ. ಪ್ರಾಯಾಣಿಕರು 25&30 ನಿಮಿಷಗಳ ಕಾಲ ರೈಲಿಗಾಗಿ ಪ್ರತಿ ನಿಲ್ದಾಣದಲ್ಲಿ ಕಾಯುವ ಪರಿಸ್ಥಿತಿ ಬರಲಿದೆ. ತ್ವರಿತವಾಗಿ, ಪೂರ್ಣಪ್ರಾಮಾಣದಲ್ಲಿ ವಾಣಿಜ್ಯ ಸಂಚಾರ ಪ್ರಾರಂಭ ಯಾವಾಗ ಎಂಬ ಪ್ರಶ್ನೆ ಉದ್ಬವಿಸಿದೆ.

ಹಳದಿ ಮಾರ್ಗದ ಉದ್ಘಾಟನೆಗೆ ರಾಜಕೀಯ ಒತ್ತಡಗಳು ಹೆಚ್ಚುತ್ತಿದ್ದು, ವಿಳಂಬದ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ. ಜುಲೈ ಅಂತ್ಯದೊಳಗಾಗಿ ದಣ ವಲಯದ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ತಪಾಸಣೆ ಪೂರ್ಣಗೊಳಿಸಿ, ಆಗಸ್ಟ್​ ಮಧ್ಯ ಭಾಗದಲ್ಲಿ ವಾಣಿಜ್ಯ ಕಾರ್ಯಾಚಣೆ ಪ್ರಾರಂಭಿಸುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ನಿರೀೆ ಇಟ್ಟಿದೆ.

ಟೆನ್​ಸೆಟ್​ ಬಂದಿಲ್ಲ, ಸ್ವತಂತ್ರ ಸುರಾ ಮೌಲ್ಯಮಾಪನಾ ಪ್ರಮಾಣ ಪತ್ರ ಸಿಕ್ಕಿಲ್ಲ, ಸಿಗ್ನಲಿಂಗ್​ ಸಮಸ್ಯೆ ಹೀಗೆ ಹಲವು ಸಬೂಬುಗಳನ್ನು ಹೇಳುತ್ತಾ ಬಿಎಂಆರ್​ಸಿಎಲ್​ ಕಾಮಗಾರಿ ಪೂರ್ತಿಗೊಂಡು ಒಂದು ವರ್ಷ ಕಳೆದರೂ ಉದ್ಘಾಟನೆಯ ಮುಹೂರ್ತವನ್ನೂ ಮುಂದೂಡುತ್ತಾ ಬಂದಿದೆ. ಇದು ನಗರದ ಚೊಚ್ಚಲ ಚಾಲಕ ರಹಿತ ಮೆಟ್ರೋ ರೈಲು ಆದ್ದರಿಂದ ತಾಂತ್ರಿಕ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಕಂಡುಕೊಳ್ಳುವುದೂ ಮುಖ್ಯವಾಗುತ್ತದೆ. ಇದೇ ರೀತಿಯಾದರೆ, ಈ ಮಾರ್ಗದಲ್ಲಿ ಪೂರ್ಣಪ್ರಮಾಣದ ತ್ವರಿತ ಸಂಚಾರಕ್ಕೆ ಒಟ್ಟು 15 ರೈಲುಗಳ ಅವಶ್ಯಕತೆ ಇದ್ದು, ಇನ್ನು 12 ರೈಲು ಪೂರೈಕೆಯಾಗಲು, ಅದು ಸಂಚಾರ ಪ್ರಾರಂಭಿಸಲು ಎಷ್ಟು ವರ್ಷಗಳು ಬೇಕಾಗಬಹುದು ಎಂಬುದು ಜನರ ಪ್ರಶ್ನೆಯಾಗಿದೆ.

ಮುಂದೆ ಒಂದೆರಡು ತಿಂಗಳಿಗೆ ಎರಡು ರೈಲುಗಳಂತೆ ಟಿಟಾರ್​ ಸಂಸ್ಥೆ ಉಳಿದ 12 ರೈಲುಗಳ ಪೂರೈಕೆಯನ್ನು ಮಾಡಬೇಕಿದ್ದು, ಈಗ ಪೂರೈಕೆಯಾಗುತ್ತಿರುವ ವೇಗ ನೋಡಿದರೆ ಕನಿಷ್ಠ 3 ವರ್ಷಗಳಾದರೂ ಆಗಬಹುದು. ಆದರೆ, ಬಿಎಂಆರ್​ಸಿಎಲ್​ ಲೆಕ್ಕಾಚಾರದಂತೆ 10 ತಿಂಗಳ ಸಮಯಾವಕಾಶ ಸಾಕು. ರೈಲುಗಳು ಪೂರೈಕೆಯಾಗುತ್ತಿದ್ದಂತೆ ಆವರ್ತನ ಅವಧಿ ಕಡಿಮೆಯಾಗುತ್ತಾ ಬರಲಿದ್ದು, 18.82 ಕಿಮೀ ಉದ್ದ ಆರ್​ವಿ ರಸ್ತೆ&ಬೊಮ್ಮಸಂದ್ರದ ಈ ಮಾರ್ಗದಲ್ಲಿ ತ್ವರಿತ ಸಂಚಾರ ಆರಂಭವಾಗಲಿದೆ.

ಕಾಯುವಿಕೆ ಅನಿವಾರ್ಯ

2024 ಜೂನ್​ನಲ್ಲಿ ಟ್ರಾ$್ಯಕ್​ ಕಾಮಗಾರಿ ಪೂರ್ಣಗೊಂಡ ಬಳಿಕ 1 ವರ್ಷದಲ್ಲಿ 3 ಟೆನ್​ ಸೆಟ್​ಗಳಷ್ಟೆ ಪೂರೈಕೆಯಾಗಿದೆ. ಒಟ್ಟಿನಲ್ಲಿ ಪ್ರಯಾಣಿಕರು ರೈಲುಗಳಿಗಾಗಿ (ನೂತನ ರೈಲುಗಳು ಬರಲು, ಕಾರ್ಯಾಚರಣೆ ಪ್ರಾರಂಭವಾದರೆ ಇರುವ ರೈಲಿನ ಆಗಮನಕ್ಕೆ) ಕಾಯಬೇಕಿರುವುದು ಅನಿವಾರ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net