ನಾಳೆ 13 ಜಿಲ್ಲೆಗಳಲ್ಲಿ ಯೆಲ್ಲೋ ಅರ್ಲಟ್​: ಹವಾಮಾನ ಇಲಾಖೆ ಮಾಹಿತಿ

rain
Published on

ಬೆಂಗಳೂರು:ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೆ ಸುಳಿಗಾಳಿ ಪರಿಣಾಮ ರಾಜ್ಯದ ಹಲವೆಡೆ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆ ಮುಂದಿನ ನಾಲ್ಕು ಮುಂದುವರಿಯಲಿದೆ.

ಶಿವಮೊಗ್ಗದ ತೀರ್ಥಹಳ್ಳಿ 41 ಮಿಮೀ, ಚಿಕ್ಕಮಗಳೂರಿನ ಮುಗಳವಳ್ಳಿ 26 ಮಿಮೀ, ದಣ ಕನ್ನಡದ ಬೆಳ್ತಂಗಡಿ 26 ಮಿಮೀ, ಪುತ್ತೂರು 22 ಮಿಮೀ, ದಾವಣಗೆರೆಯ ಚನ್ನಗಿರಿ 22 ಮಿಮೀ, ಕೊಪ್ಪಳದ ಗಂಗಾವತಿ 19 ಮಿಮೀ ಸೇರಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಬುಧವಾರವೂ ವರುಣಾರ್ಭಟ ಜೋರಾಗಿತ್ತು ಎಂದು ವರುಣಾ ಮಿತ್ರ ವಿಜಯವಾಣಿಗೆ ತಿಳಿಸಿದೆ.

ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಾಮರಾಜನಗರ ಮತ್ತು ಶಿವಮೊಗ್ಗದಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ಕೊಟ್ಟಿದೆ. ಉತ್ತರ ಕನ್ನಡ, ಕಲಬುರಗಿ, ದಾವಣಗೆರೆಯಲ್ಲಿ ಮುಂದಿನ ಎರಡು ದಿನ, ಧಾರವಾಡ, ಬೆಳಗಾವಿ, ಹಾವೇರಿ, ವಿಜಯನಗರ, ಕೊಡಗಿನಲ್ಲಿ ಮೇ 16 ರಂದು ಯೆಲ್ಲೋ ಅರ್ಲಟ್​ ಇರಲಿದೆ. ಉಳಿದೆಡೆ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ.

2-4 ಡಿ.ಸೆ.ಇಳಿಕೆ:

ಮುಂದಿನ ಐದು ದಿನ ರಾಜ್ಯದ ಕೆಲ ಜಿಲ್ಲೆಗಲ್ಲಿ ಗರಿಷ್ಠ ತಾಪಮಾನದಲ್ಲಿ 2ರಿಂದ 4 ಡಿ.ಸೆ. ಉಷ್ಣಾಂಶ ಇಳಿಮುಖವಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಕೂಡಿದ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33 ಡಿ.ಸೆ., 23 ಡಿ.ಸೆ. ಉಷ್ಣಾಂಶ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net