ಯಲ್ಲಪ್ಪಜ್ಜನ ಮಹಿಮೆ ಅಪಾರ

6Mamadapur1b
Published on

ಮಮದಾಪುರ: ಗೋಕಾಕ ತಾಲೂಕಿನ ಧುಪದಾಳ ಗ್ರಾಮದ ನವಿಲಮಾಳ ಗುಡ್ಡದ ದೊಡ್ಡ ಗುರು ಲಾಲಸಾಬವಲಿ ಕೀರಸ್ವಾಮಿ ದರ್ಗಾದಲ್ಲಿರುವ ಯಲ್ಲಪ್ಪ ಅಜ್ಜನ ಮಹಿಮೆ ಅಪಾರ. ದರ್ಗಾದಲ್ಲಿ ಸ್ವಸ್ತಿಕ್​, ಓಂ ಹಾಗೂ 786 ಚಿಹ್ನೆ, ಸಾಯಿಬಾಬಾ ಭಾವಚಿತ್ರ ವಿಭೂತಿ ಒಳಗೊಂಡಿದ್ದು, ಹಿಂದು&ಮುಸ್ಲಿಂ ಭಾವೆಕ್ಯದ ಕೇಂದ್ರವಾಗಿದೆ.

ಯಲ್ಲಪ್ಪಜ್ಜನ ಮಹಿಮೆ: ಪ್ರತಿ ಗುರುವಾರ, ಭಾನುವಾರ ಹಾಗೂ ಅಮಾವಾಸ್ಯೆಯಂದು ಅಜ್ಜನ ನುಡಿಗಳು ಜರುಗುತ್ತವೆ. ದರ್ಗಾದ ಸಭಾಭವನದಲ್ಲಿ ಕುಳಿತ ಭಕ್ತರ ಹೆಸರಿಡಿದು ಯಲ್ಲಪ್ಪಜ್ಜ ಕೂಗಿ ಕರೆಯುತ್ತಾರೆ. ಭಕ್ತರ ಕಷ್ಟಗಳನ್ನು ತಾವೇ ಹೇಳಿ ಇದೇ ಸಮಸ್ಯೆ ಪರಿಹಾರಕ್ಕೆ ಬಂದಿರುವೆ ಎನ್ನುತ್ತಾರೆ. ಇದು ಭಕ್ತರಲ್ಲಿ ಆಶ್ಚರ್ಯ ಉಂಟಾಗುತ್ತದೆ. ಅಜ್ಜನ ಕಪೆಯಿಂದ ಸಾವಿರಾರು ಜನರು ಮದ್ಯಪಾನ ವ್ಯಸನ ತ್ಯಜಿಸಿದ್ದಾರೆ.

ಸಂತಾನ ಭಾಗ್ಯವಿಲ್ಲದವರು ಮಕ್ಕಳ ಲ ಹೊಂದಿದ್ದಾರೆ. ಅನೇಕರು ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ಕಷ್ಟ ಪರಿಹಾರವಾದ ಮೇಲೆ ಭಕ್ತರು ಕಾಣಿಕೆ ಸಲ್ಲಿಸುತ್ತಾರೆ. ಭಕ್ತರಿಗೆ ಅನ್ನಪ್ರಸಾದ ಹಾಗೂ ಸಂಜೆ ಚಹಾ ವ್ಯವಸ್ಥೆ ಕಲ್ಪಿಸುತ್ತಾರೆ. ಪ್ರತಿವಾರವೂ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಕಷ್ಟಗಳಿಗೆ ಪರಿಹಾರ ನೀಡುವ ಕಲಿಯುಗದ ಕಾಮಧೇನುವಾಗಿದ್ದಾರೆ ಎಂಬುದು ಭಕ್ತರ ನಂಬಿಕೆೆ. ಕೋಡಿಮಠದ ಸ್ವಾಮೀಜಿ ಗ್ರಾಮಕ್ಕೆ ಭೇಟಿ ನೀಡಿದ್ದರು.

ಮೊಹರಂ ಕಾರ್ಯಕ್ರಮ: ಭಾನುವಾರ ಮೊಹರಂ ನಿಮಿತ್ತ ದರ್ಗಾಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಬೆಳಗ್ಗೆ ಕೊಬ್ಬರಿ ಸುಡುವ ಕಾರ್ಯಕ್ರಮ ನೆರವೇರಿತು. ಅಜ್ಜನವರು ಧುಪದಾಳಕ್ಕೆ ತೆರಳಿ ಡೋಲಿ ಹಾಗೂ ಪಾಂಜಾಗಳ ಎದುರು ಕೆಂಡ ಹಾಯ್ದು ದರ್ಗಾಕ್ಕೆ ಮರಳಿದರು. ಮಕ್ಕಳ ಲಕ್ಕೆ ಉಡಿ ತುಂಬಲಾಯಿತು.

ಸಮೃದ್ಧ ಮಳೆ&ಬೆಳೆ: ಅಜ್ಜನವರು ಈ ವರ್ಷ ಮಳೆ&ಬೆಳೆ ಸಮದ್ಧಿಯಾಗುತ್ತದೆ. ಕಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುತ್ತದೆ ಎಂದು ನುಡಿದರು. ನಂತರ ಸಿಹಿ ಪದಾರ್ಥ ನೀಡಿ, ಅದನ್ನು ಪೂಜಿಸಿದರೆ ಮನೆಯಲ್ಲಿ ಅನ್ನದ ಕೊರತೆಯಿಲ್ಲವೆಂದರು. ಅನ್ನ ಸಂತರ್ಪಣೆ ನೆರವೇರಿತು. ಗ್ರಾಮದ ಗುರು ಹಿರಿಯರು ಹಾಗೂ ದರ್ಗಾದ ಸದ್ಭಕ್ತ ಮಂಡಳಿ ಪಾಲ್ಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net