

ಹರಿಹರ: ತಾಲೂಕಿನ ಯಲವಟ್ಟಿ ಗ್ರಾಪಂ ನೂತನ ಅಧ್ಯಕ್ಷರಾಗಿ ಯಲ್ಲಮ್ಮ ಹನುಮಂತಪ್ಪ ಮತ್ತು ಉಪಾಧ್ಯಕ್ಷರಾಗಿ ರುದ್ರಮ್ಮ ಬಸವರಾಜ್ ಅವಿರೋಧ ಆಯ್ಕೆಯಾದರು.
ಯಲವಟ್ಟಿ ಗ್ರಾಪಂನಲ್ಲಿ ಶುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಯಲ್ಲಮ್ಮ ಹಾಗೂ ರುದ್ರಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ಶ್ರೀಧರ್ ಅವಿರೋಧ ಆಯ್ಕೆ ಘೋಷಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷರಾದ ಬಾವಿಕಟ್ಟಿ ಮಲ್ಲಿಕಾರ್ಜುನ, ರಮೇಶ್ ಕೆ.ಬಿ., ಕರಿಬಸಮ್ಮ, ನಾಗರಾಜ್, ಸದಸ್ಯರಾದ ಸಿದ್ದೇಶ್, ಚನ್ನಪ್ಪಗೌಡ್ರು, ರಜಿಯಾಬೇಗಂ, ಈರಾನಾಯ್ಕ, ಕೆಂಚಮ್ಮ, ಮುಖಂಡರಾದ ಕೆ. ಈಶ್ವರಪ್ಪ, ಜಿ. ಬಸವನಗೌಡ, ಹಾಲಸಿದ್ದಪ್ಪ, ಕೆ. ದೊಡ್ಡಬಸಪ್ಪ, ಎಂ. ಶಾಂತಪ್ಪ, ಕ್ಯಾರಕಟ್ಟಿ ಅಡಿವೆಪ್ಪ ಮತ್ತಿತರರಿದ್ದರು.