ಎಡಪದವು ಪ್ರೀಮಿಯರ್ ಲೀಗ್ ಸಂಪನ್ನ

yeda
ತುಳಸಿ ಫ್ರೆಂಡ್ಸ್ ಪೂಪಾಡಿಕಲ್ಲು ಎಡಪದವು ಇದರ ಆಶ್ರಯದಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಹಾಯಾರ್ಥವಾಗಿ ಎಡಪದವು ಪ್ರೀಮಿಯರ್ ಲೀಗ್-2023 ವಿಶೇಷ ಕಾರ್ಯಕ್ರಮ ನಡೆಯಿತು.
Published on

ಮಂಗಳೂರು: ತುಳಸಿ ಫ್ರೆಂಡ್ಸ್ ಪೂಪಾಡಿಕಲ್ಲು ಎಡಪದವು ಇದರ ಆಶ್ರಯದಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಹಾಯಾರ್ಥವಾಗಿ ಎಡಪದವು ಪ್ರೀಮಿಯರ್ ಲೀಗ್-2023 ವಿಶೇಷ ಕಾರ್ಯಕ್ರಮ ನಡೆಯಿತು.

ಎಡಪದವು ವಿವೇಕಾನಂದ ಕಾಲೇಜಿನ ಪ್ರಾದ್ಯಾಪಕ ವಾಸು. ಕೆ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ತುಳಸಿ ಫ್ರೆಂಡ್ಸ್ ಪೂಪಾಡಿಕಲ್ಲು ಎಡಪದ ವತಿಯಿಂದ ಪೂಪಾಡಿಕಲ್ಲು ಹಿರಿಯ ಪ್ರಾರ್ಥಮಿಕ ಶಾಲೆಗೆ ಶುದ್ಧ ನೀರಿನ ಘಟಕವನ್ನು ನೀಡಲಾಯಿತು. ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ಮಿಜಾರ್ ಹಾಗು ಬಡ ಜನ ಸೇವಾ ಫ್ರೆಂಡ್ಸ್ ಕುಪ್ಪೆಪದವು ಇವರಿಗೆ ತುಳಸಿ ಫ್ರೆಂಡ್ಸ್ ವತಿಯಿಂದ ಗೌರವಿಸಲಾಯಿತು.

ಯುವ ಉದ್ಯಮಿ ಇನಾಯತ್ ಅಲಿ, ದಾರ್ಮಿಕ ಮುಂದಾಳು ಜನಾರ್ದನ ಗೌಡ ಮುಚ್ಚುರ್, ಮಾಜಿ ಶಾಸಕ ಮೊಯಿದಿನ್ ಬಾವ, ಯುವ ಮುಂದಾಳುಗಳಾದ ಮೋಹಿನಿ ಲೋಕೇಶ್ ಸವಿತಾ ಎಸ್, ತುಳಸಿ ಫ್ರೆಂಡ್ಸ್ ನ ಗೌರವ ಅಧ್ಯಕ್ಷ ಲೋಕಯ್ಯ ಪೂಜಾರಿ ಅಧ್ಯಕ್ಷ ಲತೇಶ್, ಸದಸ್ಯರಾದ ಸಂದೀಪ್ ದಿವಾಕರ್ ಮೊದಲಾದವದ್ದರು.

ಪ್ರದಾನ ಕಾರ್ಯದರ್ಶಿ ರಿಯಾಜ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಕೊರೆಯ ಸ್ವಾಗತಿಸಿದರು. ಧನರಾಜ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net