

ಕೋಟ: ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ, ಜಿಲ್ಲಾ ಮಹಿಳಾ ವೇದಿಕೆ ಮತ್ತು ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ನೀಲಾವರದ ಗಂಗಾವಿಶ್ವೇಶ್ವರ ಸಭಾಭವನದಲ್ಲಿ ನಡೆದ ಜಿಲ್ಲಾ ತೃತೀಯ ವಿಪ್ರ ಮಹಿಳಾ ಸಮಾವೇಶದಲ್ಲಿ ಬ್ರಹ್ಮಾವರ ತಾಲೂಕು ಸಾಧಕ ಮಹಿಳೆ ಪ್ರಶಸ್ತಿಯನ್ನು ಸಾಸ್ತಾನದ ಯಶೋದಾ ಸಿ.ಹೊಳ್ಳ ಅವರಿಗೆ ನೀಡಲಾಯಿತು.
ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ, ಉಡುಪಿ ತಾಲೂಕು ಅಧ್ಯಕ್ಷ ಮಂಜುನಾಥ ಉಪಾಧ್ಯಾಯ ಪರ್ಕಳ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಅಶೋಕ್ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಮಹಿಳಾ ಸಂಚಾಲಕಿ ಶುಭ ಮಂಗಳ, ಉಡುಪಿ ಜಿಲ್ಲಾ ಸಂಚಾಲಕಿ ಶಾಂತ ಗಣೇಶ್ ಉಡುಪಿ ಮಹಿಳಾ ಜಿಲ್ಲಾಧ್ಯಕ್ಷ ಕಾಂತಿ ರಾವ್, ಜಿಲ್ಲಾ ಮಹಾಸಭಾದ ಗೌರವಾಧ್ಯಕ್ಷೆ ಶೋಭಾ ಕಲ್ಕೂರ, ತಾಲೂಕು ಮಹಿಳಾ ಅಧ್ಯಕ್ಷೆ ಶೋಭಾ ಉಪಾಧ್ಯಾಯ, ಮಂಜುಳಾ ಅಡಿಗ, ಪವಿತ್ರಾ ಅಡಿಗ ಉಪಸ್ಥಿತರಿದ್ದರು.