

ಕಾರ್ಕಳ: ಕಲ್ಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಕಲ್ಯಾ ಹಾಳೆಕಟ್ಟೆ ಚೈತನ್ಯ ಮಿತ್ರ ಮಂಡಳಿ, ಚೈತನ್ಯ ಮಹಿಳಾ ಮತ್ತು ಯುವತಿ ಮಂಡಲ ಹಾಳೆಕಟ್ಟೆ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಪ್ರಯುಕ್ತ 22ನೇ ವರ್ಷದ ಸಾಂಸ್ಕೃತಿಕ ಕ್ರೀಡೋತ್ಸವ ಜರುಗಿತು.
ರಿಕ್ಷಾ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಸುಭಾಷ್ ಶೆಟ್ಟಿಗಾರ್ ಕಾರ್ಯಕ್ರಮ ಉದ್ಘಾಟಿಸಿದರು. ಚೈತನ್ಯ ಮಿತ್ರ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಎಸ್‌ಎಸ್ ಅಧ್ಯಕ್ಷತೆ ವಹಿಸಿದ್ದರು. ಚೈತನ್ಯ ಮಹಿಳಾ ಮತ್ತು ಯುವತಿ ಮಂಡಲ ಅಧ್ಯಕ್ಷೆ ರೂಪಾಯತೀಶ್ ಕ್ರೀಡಾ ಧ್ವಜಾರೋಹಣಗೈದರು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷೆ ಆಶಾ ಪಿ.ಎಸ್, ಮಹಿಳಾ ಮಂಡಳ ಮಾಜಿ ಅಧ್ಯಕ್ಷೆ ಶಕುಂತಲಾ ಅಂಚನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಧೀರಜ್ ಶೆಟ್ಟಿ ಸ್ವಾಗತಿಸಿ, ಶ್ರೇಯಾ ಪ್ರಾರ್ಥಿಸಿ, ಸಂಧ್ಯಾ ಚೇತನ್ ಕಾರ್ಯಕ್ರಮ ನಿರೂಪಿಸಿ, ಸಿಂಚನ ವಂದಿಸಿದರು.
ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ ಬೋಳ, ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮತ್ತು ಹತ್ತನೇ ತರಗತಿಯಲ್ಲಿ ಕಲ್ಯಾ ಪ್ರೌಢಶಾಲೆಯಲ್ಲಿ ಶೇ. 95 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಮಾಸ್ಟರ್ ಹಿತೇಶ್, ದ್ವಿತೀಯ ಪಿಯುಸಿಯಲ್ಲಿ ಶೇಕಡ 90 ಅಂಕ ಪಡೆದ ಆವಿಕ್ಷ ಉಮೇಶ್, ಹಾಗೂ ಸ್ಥಳೀಯ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಸಹಾಯಕಿಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪುಷ್ಪಾ ಪೈ ಮತ್ತು ಶೋಭಾ ಪೂಜಾರ್ತಿ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಲ್ಯಾ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶಂಕರ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ಜೆಸಿಐ ತರಬೇತುದಾರೆ ಜಯಂತಿ ಶೆಟ್ಟಿ, ಗ್ರಾಪಂ ಸದಸ್ಯ ಜಗದೀಶ್ ಆಚಾರ್ಯ, ಪ್ರೇಮ ಪೂಜಾ, ಮಲ್ಲಿಕಾರ್ಜುನ್ ಎಸ್ ಎಸ್, ಪ್ರತಿಮಾ ಸಿ.ಅಮೀನ್, ರೂಪಾ ಯತೀಶ್, ಶಕುಂತಲಾ ಬಂಗೇರ, ಉಪಸ್ಥಿತರಿದ್ದರು. ಸಂಚಾಲಕ ಯತೀಶ್ ಎನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.