ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಯಂಪಳ್ಳಿ ಒತ್ತಾಯ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹೊರಗುತ್ತಿಗೆ ನೌಕರರಿಗೆ ನಿವೃತ್ತಿವರೆಗೂ ಸೇವಾ ಭದ್ರತೆ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿ.೧೮ರಂದು ಬೆಳಗಾವಿ ಸುವರ್ಣ ಸೌಧ ಎದುರು ಧರಣಿ ನಡೆಯಲಿದೆ ಎಂದು ರಾಜ್ಯ ಸರ್ಕಾರಿ ವಸತಿನಿಲಯ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಅಧ್ಯP್ಷÀ ಭೀಮಶೆಟ್ಟಿ ಯಂಪಳ್ಳಿ ಹೇಳಿದರು.
ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿP್ಷÀಣ ಸಂಸ್ಥೆಗಳ ಸಂಘದ ವಸತಿನಿಲಯಗಳಲ್ಲಿ ಸುಮಾರು ೨೫ ಸಾವಿರ ಹೊರಗುತ್ತಿಗೆ ನೌಕರರು ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಭದ್ರತೆ ಇಲ್ಲ. ಕಾಯಂ ನೌಕರರು ಬಂದರೆ ಹೊರಗುತ್ತಿಗೆಯವರು ಕೆಲಸ ಕಳೆದುಕೊಂಡು ಮನೆಗೆ ಹೋಗಬೇಕಿದೆ. ಇನ್ನು ಇವರಿಗೆ ಏಜೆನ್ಸಿಗಳು ಪ್ರತಿ ತಿಂಗಳು ವೇತನ ಪಾವತಿಸುವುದಿಲ್ಲ. ಇಪಿಎಫ್, ಇಎಸ್‌ಐ ಸರಿಯಾಗಿ ಭರಿಸುವುದಿಲ್ಲ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ನಿವೃತ್ತಿವರೆಗೆ ಸೇವಾ ಭದ್ರತೆಯೊಂದಿಗೆ ಮಾಸಿಕ ೩೧ ಸಾವಿರ ರೂ. ವೇತನ ನೀಡಬೇಕು. ಸಿಬ್ಬಂದಿ ಕಡಿತದ ಆದೇಶ ವಾಪಸ್ ಪಡೆಯಬೇಕು. ಕಾರ್ಮಿಕರ ಕಾನೂನು ಪ್ರಕಾರ ಎಂಟು ತಾಸು ದುಡಿಮೆ ಮತ್ತು ವಾರಕ್ಕೊಂದು ರಜೆ ಕಡ್ಡಾಯ ಕೊಡಬೇಕು. ಮ್ಯಾನ್‌ಪವರ್ ಏಜೆನ್ಸಿ ರದ್ದುಪಡಿಸಿ ಇಲಾಖೆಯಿಂದಲೇ ಸಂಬಳ ಪಾವತಿಸಬೇಕು. ೧೦ ವರ್ಷ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ಸಿಬ್ಬಂದಿಯನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಡಿ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿದರು.
ಪರಶುರಾಮ ಹಡಗಿಲï, ಕಾಶಿನಾಥ ಬಂಡಿ, ಮೇಘರಾಜ ಕಠಾರೆ, ಜ್ಯೋತಿ ದೊಡ್ಡಮನಿ ಇದ್ದರು.